ಶಿವಮೊಗ್ಗ ಲೈವ್.ಕಾಂ | SHIMOGA | 4 ಫೆಬ್ರವರಿ 2020
ಶಿವಮೊಗ್ಗದ ನವುಲೆ ಕ್ರಿಕೆಟ್ ಮೈದಾನದಲ್ಲಿ ಇವತ್ತಿನಿಂದ ಮಧ್ಯಪ್ರದೇಶ ವರ್ಸಸ್ ಕರ್ನಾಟಕ ರಣಜಿ ಕ್ರಿಕೆಟ್ ಕದನ ಆರಂಭವಾಗಿದೆ. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ, ವಲಯ ಸಂಚಾಲಕ ಡಿ.ಎಸ್.ಅರುಣ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ಟಾಸ್ ಗೆದ್ದ ಮಧ್ಯಪ್ರದೇಶ, ಕರ್ನಾಟಕಕ್ಕೆ ಆರಂಭಿಕ ಆಘಾತ
ಇನ್ನು, ಟಾಸ್ ಗೆದ್ದ ಮಧ್ಯಪ್ರದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮತ್ತೊಂದೆಡೆ ಬ್ಯಾಟಿಂಗ್’ಗೆ ಇಳಿದ ಕರ್ನಾಟಕಕ್ಕೆ ಆರಂಭಿಕ ಆಘಾತವಾಗಿದೆ. ರನ್ ಖಾತೆ ತೆರೆಯುವ ಮೊದಲೇ ಕರ್ನಾಟಕ ತಂಡ ಪ್ರಮುಖ ವಿಕೆಟ್ ಕಳೆದುಕೊಂಡಿತು.
ಕರ್ನಾಟಕದ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ರೋಹನ್ ಕದಮ್ 9 ರನ್ ಪಡೆದು ರಜತ್ ಅವರಿಗೆ ಕ್ಯಾಚ್ ಒಪ್ಪಿಸಿ, ಪೆವಿಲಿಯನ್ ತಲುಪಿದರು. ಊಟದ ವಿರಾಮದ ವೇಳೆಗೆ ಕರ್ನಾಟಕ 2 ವಿಕೆಟ್’ಗೆ 64 ರನ್ ಸ್ಕೋರ್ ಮಾಡಿದೆ. ರವಿಕುಮಾರ್ ಸಮರ್ಥ (25) ಮತ್ತು ಕರುಣ್ ನಾಯರ್ (13) ರನ್ ಗಳಿಸಿ ಕ್ರೀಸ್’ನಲ್ಲಿ ಉಳಿದುಕೊಂಡಿದ್ದಾರೆ.
ಮೊದಲ ಸೆಷನ್’ನಲ್ಲಿ 31 ಓವರ್’ಗಳು ಮುಗಿದಿದೆ. ಗೌರವ್ ಯಾಧವ್ 10 ಓವರ್ ಮತ್ತು ಒಂದು ವಿಕೆಟ್, ರವಿ ಯಾದವ್ 8 ಓವರ್ ಮತ್ತು ಒಂದು ವಿಕೆಟ್ ಪಡೆದಿದ್ದಾರೆ. ಕುಲ್ದೀಪ್ ಸೆನ್ 6, ವೆಂಕಟೇಶ್ ಐಯ್ಯರ್ 3, ಕುಮಾರ ಕಾರ್ತಿಕೇಯ 4 ಓವರ್ ಮಾಡಿದ್ದಾರೆ.










ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]