SHIVAMOGGA LIVE NEWS | 25 AUGUST 2023
ಕೃಷ್ಣನ ಬಗ್ಗೆ ಮಾಹಿತಿ ಕೊಟ್ಟರೆ ನಗದು ಬಹುಮಾನ
SHIMOGA : ಗೋಪಾಲಗೌಡ ಬಡಾವಣೆಯಿಂದ ಬಿಳಿ ಬಣ್ಣದ ಕೋಕ್ಟೇಲ್ ಪಕ್ಷಿ ಕಾಣೆಯಾಗಿದೆ. ಈ ಪಕ್ಷಿ ಬಿಳಿ ಗಿಳಿಯ ರೀತಿ ಕಾಣುತ್ತೆ. ಇಲ್ಲಿನ ಮೋರ್ ಸೂಪರ್ ಮಾರ್ಕೆಟ್ ಬಳಿಯಿಂದ ಕಣ್ಮರೆಯಾಗಿದೆ. ಮಾಲೀಕರು ಇದಕ್ಕೆ ಕೃಷ್ಣ ಎಂದು ಹೆಸರು ಇಟ್ಟಿದ್ದಾರೆ. ಈ ಪಕ್ಷಿ ಕಂಡಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮಾಲೀಕರು ಮನವಿ ಮಾಡಿದ್ದಾರೆ. ಮಾಹಿತಿ ನೀಡಿದವರಿಗೆ ಸೂಕ್ತ ನಗದು ಬಹುಮಾನ ಘೋಷಿಸಿದ್ದಾರೆ. ಸಂಪರ್ಕಿಸಿ : 9886687209, 9108399502.
ಇದನ್ನೂ ಓದಿ- ಚಂದ್ರಯಾನ 3 ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿಜ್ಞಾನಿ, ಇವರು ಮಾಜಿ MLA ಪುತ್ರಿ, JNNCE ವಿದ್ಯಾರ್ಥಿನಿ
ನೂತನ ಸಚಿವರು, ಶಾಸಕರಿಗೆ ಸನ್ಮಾನ
SAGARA : ಪ್ರಾಂತ್ಯ ಆರ್ಯ ಈಡಿಗರ ಸಂಘದಿಂದ ಆ.27ರಂದು ಬೆಳಗ್ಗೆ 11ಕ್ಕೆ ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಮುದಾಯ ಭವನದಲ್ಲಿ ಸಮಾಜದ ನೂತನ ಶಾಸಕರು ಮತ್ತು ಸಚಿವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ಟಿ.ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರೂ ಆದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಹಿಸಲಿದ್ದಾರೆ. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಬಾಲಕ, ಬಾಲಕಿಯರಿಗೆ ಫುಟ್ಬಾಲ್, ಹಾಕಿ ಆಯ್ಕೆ
