ಇನ್ನೋವಾ ಕಾರಿನಲ್ಲಿ ಗಾಂಜಾ, ಮಾರಕಾಸ್ತ್ರಗಳು
SHIMOGA : ಖಚಿತ ಮಾಹಿತಿ ಮೇರೆಗೆ ಇನ್ನೋವಾ ಕಾರು ತಡೆದು ಪೊಲೀಸರು ತಪಾಸಣೆ ನಡೆಸಿದಾಗ ಗಾಂಜಾ, ಮಾರಕಾಸ್ತ್ರಗಳು ಪತ್ತೆಯವಾಗಿವೆ. ಮಂಡ್ಲಿ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ ಇನ್ನೋವಾ ಕಾರಿನಲ್ಲಿದ್ದ 23 ಸಾವಿರ ರೂ. ಮೌಲ್ಯದ 440 ಗ್ರಾಂ ಒಣ ಗಾಂಜಾ, ಒಂದು ಮಚ್ಚು, ಭರ್ಚಿ, ಡ್ರ್ಯಾಗರ್ ವಶಕ್ಕೆ ಪಡೆಯಲಾಗಿದೆ. ಕಾರು ಚಾಲಕ ಅರ್ಬಾಜ್ ಅಲಿಯಾಸ್ ಹರ್ಬಾಜ್ ಎಂಬಾತನನ್ನು ಬಂಧಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. → ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ