ಶಿವಮೊಗ್ಗ ಲೈವ್.ಕಾಂ | SAGARA | 16 ಮಾರ್ಚ್ 2020
ಕಾರು ಚಾಲಕ ಹರ್ಷಕುಮಾರ್ ಮತ್ತು ಅವರ ಪತ್ನಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು ಎಂದು ವಿವಿಧ ಸಂಘಟನೆಗಳು ಸಾಗರದಲ್ಲಿ ಇವತ್ತು ಮೌನ ಪ್ರತಿಭಟನೆ ನಡೆಸಿದವು.

ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು. ಹರ್ಷಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ ಎಂದು ಆರೋಪಿಸಿದರು.
ಹರ್ಷಕುಮಾರ್ ಅವರ ಸಹೋದರಿ ಆಶಾರಾಣಿ, ಪ್ರಮುಖರಾದ ಗಿರೀಶ್ ಕೋವಿ, ಮಲ್ಲಿಕಾರ್ಜುನ ಹಕ್ರೆ,ತಾರಾಮೂರ್ತಿ,ಶಿವಾನಂದ ಕುಗ್ವೆ, ಫ್ರೆಶಪ್ ಅನ್ವರ್, ಹೆಚ್.ಬಿ ರಾಘವೇಂದ್ರ, ಉಮೇಶ್, ಸುಧಾಕರ್ ಕುಗ್ವೆ, ತುಕಾರಾಂ ಶಿರವಾಳ, ಅರುಣ್ ಕುಗ್ವೆ, ಪ್ರವೀಣ್ ಬಣಕಾರ್, ಕುಂಟಗೋಡ್ ಸೀತಾರಾಮ್, ವಕೀಲ ಸುದರ್ಶನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]