ಒಂದೇ ತಿಂಗಳಲ್ಲಿ 69 ಲಕ್ಷ ವಾಟ್ಸಪ್‌ ಅಕೌಂಟ್‌ಗಳು ಬ್ಯಾನ್‌, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
WHATSAPP : ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ 2023ರ ಡಿಸೆಂಬರ್‌ ತಿಂಗಳಲ್ಲಿ ಭಾರತದಲ್ಲಿ 69 ಲಕ್ಷ ವಾಟ್ಸಪ್‌ ಖಾತೆಗಳನ್ನು ಬ್ಯಾನ್‌ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅನ್ವಯ ಈ ಖಾತೆಗಳನ್ನು ಬ್ಯಾನ್‌ ಮಾಡಿದೆ.
➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಡಿ.1 ರಿಂದ 31ರವರೆಗೆ ನಾನಾ ಕಾರಣಕ್ಕೆ 69 ಲಕ್ಷ ವಾಟ್ಸಪ್‌ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಈ ಪೈಕಿ, ಬಳಕೆದಾರರು ರಿಪೋರ್ಟ್‌ ಮಾಡದಿದ್ದರೂ 16 ಲಕ್ಷ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ದೂರುಗಳನ್ನು ಸ್ವೀಕರಿಸಿ, ಪರಿಶೀಲಿಸಿ ವಾಟ್ಸಪ್‌ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗುತ್ತಿದೆ. ನವೆಂಬರ್‌ ತಿಂಗಳಲ್ಲಿ 71 ಲಕ್ಷ ವಾಟ್ಸಪ್‌ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿತ್ತು.

ಇದನ್ನೂ ಓದಿ – ಐಫೋನ್‌ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ ನಾಲ್ಕೇ ಗಂಟೆಯಲ್ಲಿ ಅರೆಸ್ಟ್‌, ಸಿಕ್ಕಿಬಿದ್ದಿದ್ದು ಹೇಗೆ?

Leave a Comment