ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
WHATSAPP NEWS : ತನ್ನ ಗೈಡ್‌ಲೈನ್ ಉಲ್ಲಂಘಿಸುವವರಿಗೆ ವಾಟ್ಸಪ್ ಸಂಸ್ಥೆ ಖಡಕ್ ಎಚ್ಚರಿಕೆ ನೀಡಿದೆ. ಕಮ್ಯೂನಿಟಿ ಸ್ಟಾಂಡರ್ಡ್ ಗೈಡ್‌ಲೈನ್ ಉಲ್ಲಂಘಿಸಿದ 71 ಲಕ್ಷ ಭಾರತೀಯ ಅಕೌಂಟ್‌ಗಳನ್ನು ಒಂದೇ ತಿಂಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ ತನ್ನ ವರದಿಯಲ್ಲಿ ತಿಳಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕಳೆದ ವರ್ಷ ನವೆಂಬರ್ 1 ರಿಂದ 30ರವರೆಗೆ 71 ಲಕ್ಷ ವಾಟ್ಸಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಇತರೆ ಬಳಕೆದಾರರ ದೂರು, ಗ್ರೀವಿಯನ್ಸ್ ಅಪೆಲೇಟ್ ಕಮಿಟಿಯ ಸೂಚನೆಗಳ ಆಧಾರದಲ್ಲಿ ವಾಟ್ಸಪ್ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಕಳೆದ ವರ್ಷ ಅಕ್ಟೋಬರ್ 1 ರಿಂದ 31ರವರೆಗೆ 75 ಲಕ್ಷ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗಿತ್ತು.
ಇದನ್ನೂ ಓದಿ – ವಾಟ್ಸಪ್‌ನ COMPANION MODE ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪೂರ್ತಿ ವಿವರ
ವಾಟ್ಸಪ್ ಮೆಸೇಜ್ ಪ್ಲಾಟ್ ಫಾರಂ ಅನ್ನು ದುರ್ಬಳಕೆ ಮಾಡಿಕೊಂಡು, ತನ್ನ ನಿಯಮಗಳನ್ನು ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಲು ವಾಟ್ಸಪ್ ಸಂಸ್ಥೆ ಅಕೌಂಟ್‌ಗಳನ್ನು ಬ್ಯಾನ್ ಮಾಡುತ್ತಿದೆ. ಬಳಕೆದಾರರು ವಾಟ್ಸಪ್‌ನ ವೆಬ್‌ಸೈಟ್‌ನಲ್ಲಿ ಗೈಡ್‌ಲೈನ್ ಓದಿಕೊಂಡರೆ ತಮ್ಮ ಅಕೌಂಟ್‌ಗಳು ಸೇಫ್ ಆಗಿ ಉಳಿಯಲಿವೆ.