ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
APP LOKA : ಬ್ಯಾಂಕ್ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ (Credit Score) ಬಹಳ ಮುಖ್ಯ. ಇದರಲ್ಲಿ ಏರುಪೇರಾಗಿದ್ದರೆ ಸಾಲ ಸಿಗುವುದು ಕಷ್ಟ. ಹಾಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕ್ರಿಡಿಟ್ ಸ್ಕೋರ್ ಪರಿಶೀಲಿಸಿಕೊಳ್ಳುವುದು ಅಗತ್ಯ. ಆದರೆ ಉಚಿತವಾಗಿ ತಿಳಿಸುವವರು ಕಡಿಮೆ. ಈ ಸಮಸ್ಯೆಗೆ ಒಂದು appನಿಂದ ಪರಿಹಾರ ಸಿಗಲಿದೆ.
ಕ್ರೆಡಿಟ್ ಸ್ಕೋರ್ ಅನ್ನುವುದು ನಮ್ಮ ಆರ್ಥಿಕ ಚುಟುವಟಿಕೆಯ ಪಕ್ಷಿ ನೋಟ. 300 ರಿಂದ 850ರವರಗೆ ಪಾಯಿಂಟ್‌ಗಳಿರಲಿವೆ. ನಿಮ್ಮ ಸ್ಕೋರ್ ಎಷ್ಟಿದೆ ಅನ್ನುವುದರ ಆಧಾರದ ಮೇಲೆ ಸಾಲ ಮತ್ತು ಇತರೆ ಬ್ಯಾಂಕಿಂಗ್ ಸೌಲಭ್ಯ ಲಭಿಸುತ್ತವೆ.
ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ಹಣ
ಕ್ರೆಡಿಟ್ ಇನ್‌ಫರ್‌ಮೇಷನ್ ಬ್ಯೂರೊ (ಸಿಬಿಲ್) ಸಂಸ್ಥೆ ಕ್ರಿಡಿಟ್ ಸ್ಕೋರ್‌ಗಳ ನಿರ್ವಹಣೆ ಮಾಡುತ್ತದೆ. ಈ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕ್ರಿಡಿಟ್ ಸ್ಕೋರ್ ಪರಿಶೀಲನೆಗೆ 550 ರೂ. ನಿಂದ 1200 ರೂ. ಪಾವತಿ ಮಾಡಬೇಕು. ಇದೆ ಕಾರಣಕ್ಕೆ ಹಲವರು ಕ್ರೆಡಿಟ್ ಸ್ಕೋರ್ ಪರಿಶೀಲನೆಯ ಉಸಾಬರಿಗೆ ಹೋಗುವುದಿಲ್ಲ.
ಇದನ್ನೂ ಓದಿ- ಸತತ 11 ಗಂಟೆ ಮೂರು ಕಡೆ ಪರಿಶೀಲಿಸಿದ ಇಡಿ ಅಧಿಕಾರಿಗಳು
ಉಚಿತವಾಗಿ ಪರಿಶೀಲಿಸಬಹುದು
ಕ್ರೆಡಿಟ್ ಸ್ಕೋರ್‌ಗಳ ಪರಿಶೀಲನೆಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ One Score ಎಂಬ app ಲಭ್ಯವಿದೆ. ಇದರಲ್ಲಿ ಉಚಿತವಾಗಿ ಕ್ರಿಡಿಟ್ ಸ್ಕೋರ್ ಪರಿಶೀಲಿಸಬಹುದು. ಅಲ್ಲದೆ ಸ್ಕೋರ್ ಏರಿಳಿತದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. APP ಡೌನ್‌ಲೋಡ್ ಮಾಡಿ ಪ್ಯಾನ್ ಕಾರ್ಡ್ ಮಾಹಿತಿ, ವಿಳಾಸ ಸೇರಿದಂತೆ ಕೆಲವು ಪ್ರಮುಖ ಮಾಹಿತಿ ದಾಖಲಿಸಬೇಕು. ಇದರಲ್ಲಿ ಪ್ರಕಟವಾಗುವ ಕ್ರಿಡಿಟ್ ಸ್ಕೋರ್ ಬಹುತೇಕ ನಿಖರ ಎಂಬ ಅಭಿಪ್ರಾಯವಿದೆ.