ವಾಟ್ಸಪ್‌ನ COMPANION MODE ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪೂರ್ತಿ ವಿವರ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 19 DECEMBER 2023
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

WHATSAPP NEWS | ವಾಟ್ಸಪ್‌ ತನ್ನ ಬಳಕೆದಾರರ ಅನುಕೂಲಕ್ಕೆ COMPANION MODE ರಿಲೀಸ್‌ ಮಾಡಿದೆ. 2023ರ ಏಪ್ರಿಲ್‌ನಿಂದ ಈ ಫೀಚರ್‌ ಇದೆ. ಒಂದೇ ವಾಟ್ಸಪ್‌ ಖಾತೆಯನ್ನು ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ಗಳು ಸೇರಿ ನಾಲ್ಕು ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ.

ಕಂಪಾನಿಯನ್‌ ಮೋಡ್‌ನಲ್ಲಿ ವಾಟ್ಸಪ್‌ ಬಳಸುತ್ತಿರುವ ಡಿವೈಸ್‌ಗಳಲ್ಲಿ ವಾಟ್ಸಪ್‌ ಚಾಟ್‌, ವಾಯ್ಸ್‌ ಮತ್ತು ವಿಡಿಯೋ ಕಾಲ್‌ ಮಾಡಬಹುದು. ಆದರೆ ಹೊಸ ಅಪ್‌ಡೇಟ್‌, ಸ್ಟೇಟಸ್‌, ಚಾನಲ್‌ಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.

ಕಂಪಾನಿಯನ್‌ ಮೋಡ್‌ ಬಳಸೋದು ಹೇಗೆ?

ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಐಒಎಸ್‌ ಮೂಲಕ ವಾಟ್ಸಪ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಬೇಕು. ಬಳಿಕ ಭಾಷೆ ಆಯ್ಕೆ ಮಾಡಬೇಕು. ಮೊಬೈಲ್‌ ನಂಬರ್‌ ದಾಖಲು ಮಾಡುವ ಪೇಜ್‌ ತೆರೆದುಕೊಳ್ಳಲಿದ್ದು ಮೊಬೈಲ್‌ ನಂಬರ್‌ ದಾಖಲಿಸುವ ಬದಲು ಬಲ ಭಾಗ ಮೇಲೆ ಮೆನು ಕ್ಲಿಕ್‌ ಮಾಡಬೇಕು. ಇದರಲ್ಲಿನ LINK ANOTHER DEVICE ಆಪ್ಷನ್‌ ಕ್ಲಿಕ್‌ ಮಾಡಬೇಕು. ಅಲ್ಲಿ QR CODE ಕಾಣಿಸಲಿದೆ. ಅದನ್ನು ವಾಟ್ಸಪ್‌ ಖಾತೆ ಹೊಂದಿರುವ ಪ್ರೈಮರಿ ಡಿವೈಸ್‌ ಮೂಲಕ ಸ್ಕ್ಯಾನ್‌ ಮಾಡಿದರೆ ಲಿಂಕ್‌ ಆಗಲಿದೆ.

ಇದನ್ನೂ ಓದಿ – ಸದ್ಯದಲ್ಲೆ ವಾಟ್ಸಪ್‌ನಲ್ಲಿ ರಿಲೀಸ್‌ ಆಗಲಿದೆ 3 ಹೊಸ ಫೀಚರ್‌, ಯಾವುದದು? ಏನದರ ಪ್ರಯೋಜನ?

Leave a Comment