ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
WHATSAPP NEWS | 2021ರಲ್ಲಿ ವಾಟ್ಸಪ್ ಫೋಟೊ, ವಿಡಿಯೋಗಳಿಗೆ VIEW ONCE ಆಪ್ಷನ್ ಬಿಡುಗಡೆ ಮಾಡಿತ್ತು. ಈಗ ಇದೆ ಫೀಚರ್ ಅನ್ನು VOICE MESSAGEಗು ವಿಸ್ತರಿಸಲು ಮೆಟಾ ಸಂಸ್ಥೆ ಯೋಜಿಸಿದೆ.
ಇನ್ಮುಂದೆ VIEW ONCE ವಾಯ್ಸ್ ಮೆಸೇಜ್‌ಗಳು ವಾಟ್ಸಪ್‌ನಲ್ಲಿ ಕಾಣಿಸಲಿವೆ. ಒನ್ ಟೈಮ್ ವಾಯ್ಸ್ ಮೆಸೇಜ್‌ಗಳು ಒಮ್ಮೆ ಕೇಳುತ್ತಿದ್ದಂತೆ ಆಟೋ ಡಿಲೀಟ್ ಆಗಲಿವೆ. ಸೂಕ್ಷ್ಮ ಮಾಹಿತಿಗಳು, ಸರ್‌ಪ್ರೈಸ್ ಸಂಗತಿಗಳನ್ನು ವಾಯ್ಸ್ ನೋಟ್ ಮೂಲಕ ಕಳುಹಿಸಲು ಇದು ಅನುಕೂಲ ಎಂದು ಮೆಟಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ವಾಟ್ಸಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸುವಂತೆಯೇ VIEW ONCE VOICE MESSAGEಗಳನ್ನು ಕಳುಹಿಸಬಹುದು. ಆದರೆ SEND ಮಾಡುವ ಮುನ್ನ VIEW ONCE ಆಪ್ಷನ್ ಕ್ಲಿಕ್ ಮಾಡಿದರಾಯ್ತು. ಒಮ್ಮೆ ಆಡಿಯೋ ಮೆಸೇಜ್ ಕೇಳಿದರೆ ಡಿಲೀಟ್ ಆಗಲಿದೆ ಮತ್ತು OPENED ಎಂದು ತೋರಿಸಲಿದೆ. ಒಂದು ವೇಳೆ VIEW ONCE ವಾಯ್ಸ್ ಮೆಸೇಜ್ ಅನ್ನು ನೀವು ಕಳುಹಿಸಿದವರು ನೋಡದೆ ಇದ್ದರೆ 14 ದಿನದ ಬಳಿಕ ತನ್ನಿಂತಾನೆ ಡಿಲೀಟ್ ಆಗಲಿದೆ. ಇನ್ನು, ಈ ವಾಯ್ಸ್ ಮೆಸೇಜ್‌ಗಳನ್ನು ಸೇವ್, ಷೇರ್, ಸ್ಟಾರ್ ಮಾಡಲು ಸಾಧ್ಯವಿಲ್ಲ ಎಂದು ಮೆಟಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ – ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್