ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 8 JANUARY 2024
WHATSAPP NEWS : ಬಳೆದಾರರ ಅನುಕೂಲಕ್ಕೆ ತಕ್ಕ ಹಾಗೆ ವಾಟ್ಸಪ್ ಹೊಸ ಹೊಸ ಅಪ್‌ಡೇಟ್ ಬಿಡುಗಡೆ ಮಾಡುತ್ತಿದೆ. ಈಗ ಮತ್ತೊಂದು ಅಪ್‌ಡೇಟ್‌ನ ಸುಳಿವು ನೀಡಿದೆ ಮೆಟಾ ಸಂಸ್ಥೆ. ಈವರೆಗೂ ವಾಟ್ಸಪ್‌ನಲ್ಲಿ ಹಸಿರು ಬಣ್ಣದ ಬ್ಯಾಕ್ ಗ್ರೌಂಡ್ ಮಾತ್ರವೇ ಇತ್ತು. ಒಂದೇ ಥೀಮ್ ನೋಡಿ ಬಳಕೆದಾರರು ಕೂಡ ಬೇಸರಗೊಂಡಿದ್ದರು. ಇದೆ ಕಾರಣಕ್ಕೆ ಬಣ್ಣ ಬಣ್ಣದ ಥೀಮ್ ಪರಿಚಿಯಿಸಲು ವಾಟ್ಸಪ್ ಮುಂದಾಗಿದೆ.
ಈವರೆಗೂ ವಾಟ್ಸಪ್ ತನ್ನ ಬಳಕೆದಾರರಿಗೆ ಥೀಮ್ ಬದಲಾವಣೆಗೆ ಅವಕಾಶ ನೀಡಿರಲಿಲ್ಲ. ಆದರೆ ಕೆಲವು ಸಮಯದ ಹಿಂದೆ ಡಾರ್ಕ್ ಮೋಡ್ ಪರಿಚಯಿಸಿತ್ತು. ಹಾಗಾಗಿ ಲೈಟ್ ಮತ್ತು ಡಾರ್ಕ್ ಮೋಡ್ ಮಾತ್ರ ಇತ್ತು. ಈಗ ಐದು ಬಣ್ಣದ ಹೊಸ ಥೀಮ್‌ಗಳನ್ನು ಪರಿಚಯಿಸಲು ವಾಟ್ಸಪ್ ಮುಂದಾಗಿದೆ. ಗ್ರೀನ್, ಬ್ಲೂ, ವೈಟ್, ಪಿಂಕ್ ಮತ್ತು ಪರ್ಪಲ್ ಬಣ್ಣಗಳ ಥೀಮ್ ಪರಿಚಯಿಸಲು ಮುಂದಾಗಿದೆ.
ಇದನ್ನೂ ಓದಿ – ಒಂದೇ ತಿಂಗಳು 71 ಲಕ್ಷ ವಾಟ್ಸಪ್ ಬ್ಯಾನ್, ನಿಮ್ಮ ವಾಟ್ಸಪ್ ಕಾಪಾಡಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ
ಸದ್ಯ ಬೀಟಾ ವರ್ಷನ್ ವಾಟ್ಸಪ್‌ನಲ್ಲಿ ಈ ಥೀಮ್‌ಗಳನ್ನು ಟೆಸ್ಟಿಂಗ್‌ಗೆ ಅಪ್‌ಡೇಟ್ ಮಾಡಲಾಗಿದೆ. ಬೀಟಾ ವರ್ಷನ್ ಬಳಕೆದಾರರು ಕೂಡ ಹೊಸ ಥೀಮ್‌ಗಳಿಗೆ ಫಿದಾ ಆಗಿದ್ದಾರಂತೆ. ಹಾಗಾಗಿ ಇನ್ನು ಕೆಲವೆ ಸಮಯದಲ್ಲಿ ಬಣ್ಣ ಬಣ್ಣದ ಥೀಮ್‌ಗಳು ನಿಮ್ಮ ವಾಟ್ಸಪ್‌ನಲ್ಲು ಕಾಣಿಸಿಕೊಳ್ಳಬಹುದು.






