| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | 21 FEBRUARY 2024
WHATSAPP : ಹರಡುತ್ತಿರುವ ರಾಶಿಗಟ್ಟಲೆ ಸುಳ್ಳು ಸುದ್ದಿಗಳಿಗೆ ತಡೆಯೊಡ್ಡಲು ವಾಟ್ಸಪ್ ಸಂಸ್ಥೆ ಮಹತ್ವದ ಹೆಜ್ಜೆ ಇರಿಸಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್ ಫೇಕ್‌ಗಳ ಪತ್ತೆಗೆ ಫ್ಯಾಕ್ಟ್ ಚೆಕ್ ಹೆಲ್ಪ್‌ಲೈನ್ ಆರಂಭಿಸಲು ನಿರ್ಧರಿಸಿದೆ. ಈ ಸಂಬಂಧ ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಹೇಗೆ ಕಾರ್ಯನಿರ್ವಹಿಸುತ್ತೆ ಹೆಲ್ಪ್‌ಲೈನ್?
ಸುಳ್ಳು ಸುದ್ದಿ ಮತ್ತು ಮಾಹಿತಿಗಳು ವಾಟ್ಸಪ್‌ನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಹೆಲ್ಪ್‌ಲೈನ್ ಪ್ರಾರಂಭಿಸಲಾಗಿದೆ. ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ನಿಜವೋ, ಸುಳ್ಳೋ ಎಂದು ಮೆಸೇಜ್ ಮಾಡಿದರೆ ಸಾಕು. ಅದನ್ನು ಖಚಿತಪಡಿಸಲಾಗುತ್ತದೆ. ಇಂಗ್ಲೀಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಹೆಲ್ಪ್‌ಲೈನ್ ಕಾರ್ಯನಿರ್ವಹಿಸಲಿದೆ.
ಬಳಕೆದಾರರು ಹೆಲ್ಪ್‌ಲೈನ್‌ಗೆ ಕಳುಹಿಸುವ ಮಾಹಿತಿಯನ್ನು ಸ್ವತಂತ್ರ ಸಂಸ್ಥೆಗಳ ಮೂಲಕ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತದೆ ಎಂದು ಮೆಟಾ ತಿಳಿಸಿದೆ. ಇದಕ್ಕಾಗಿ ಮಿಸ್‌ಇನ್ಫರ್ಮೇಷನ್ ಕಾಂಬ್ಯಾಟ್ ಅಲಯನ್ಸ್ ಜೊತೆಗೆ ಸಹಯೋಗ ಪಡೆಯಲಾಗಿದೆ ಎಂದು ಮೆಟಾ ತಿಳಿಸಿದೆ. ಮಂದಿನ ತಿಂಗಳಿಂದ ಈ ಹೆಲ್ಪ್‌ಲೈನ್ ಕಾರ್ಯಾರಂಭ ಮಾಡಲಿದೆ.
ಇದನ್ನೂ ಓದಿ – ವಾಟ್ಸಪ್ ಸ್ಟೇಟಸ್ ಪ್ರಿಯರಿಗೆ ಗುಡ್ ನ್ಯೂಸ್, ಸದ್ಯದಲ್ಲೆ ಬರಲಿದೆ ಹೊಸ ಫೀಚರ್
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
- ಶಿವಮೊಗ್ಗದ ಜೊತೆಗೆ ಶಾಮನೂರು ನಂಟು, ಇಲ್ಲಿತ್ತು ವ್ಯಾವಹಾರಿಕ ಸಂಬಂಧ, ಶಿಷ್ಯರ ಬಳಗ, ಚಿಕ್ಕಮ್ಮನ ಮನೆ
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
![]()