ಕಾರುಗಳಿಗೆ 30 ಪ್ರಮುಖ ಚೆಕಪ್‌ ಉಚಿತ, ಜುಲೈ 8ರವರೆಗೆ ಹಲವು ಆಫರ್‌, ಎಲ್ಲಿ? ಏನೇನೆಲ್ಲ ಆಫರ್‌ಗಳಿವೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಹುಂಡೈ ಮೋಟಾರ್ಸ್ ಭಾರತದಲ್ಲಿ 30 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಗ್ರಾಹಕರಿಗಾಗಿ ‘ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್’ ಶಿಬಿರ ಆಯೋಜಿಸಿದೆ. ಜೂನ್ 24ರಿಂದ ಆರಂಭವಾಗಿರುವ ಈ ಆಫರ್‌ಗಳು ಜುಲೈ 8ರವರೆಗೆ ಲಭ್ಯವಿರಲಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಸ್ಮಾರ್ಟ್‌ ಕೇರ್‌ ಕ್ಲಿನಿಕ್‌ನಲ್ಲಿ ಏನೇನಿರುತ್ತೆ?

ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್‌ನಲ್ಲಿ ಜುಲೈ 8ವರೆಗೆ ಗ್ರಾಹಕರು ತಮ್ಮ ಎಲ್ಲಾ ಮಾದರಿಯ ಹುಂಡೈ ವಾಹನಗಳಿಗೆ ಉಚಿತವಾಗಿ 30 ಪ್ರಮುಖ ಅಂಶಗಳ ತಪಾಸಣೆಯನ್ನು (ಎಂಜಿನ್, ಬ್ರೇಕ್ ಸೇರಿದಂತೆ ಇತರೆ) ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ವಿಸ್ತರಿತ ವಾರಂಟಿ (Extended Warranty), ಮೆಕ್ಯಾನಿಕಲ್ ಲೇಬರ್, ರೋಡ್‌ಸೈಡ್ ಅಸಿಸ್ಟೆನ್ಸ್ ಹಾಗೂ ಆಯ್ದ ಕಾರ್ ಕೇರ್ ಸೇವೆಗಳ ಮೇಲೆ ಶೇ.30ರವರೆಗೆ ರಿಯಾಯಿತಿ ಘೋಷಿಸಲಾಗಿದೆ.

Rahul-Hyundai-showroom-in-Shimoga

ಇನ್ನು, ವಾಹನಗಳ ಮೆಕ್ಯಾನಿಕಲ್ ಹಾಗೂ ನಿರ್ವಹಣಾ ಬಿಡಿಭಾಗಗಳ (Maintenance parts) ಖರೀದಿ ಮತ್ತು ಬ್ಲೂಲಿಂಕ್ ಸಬ್‌ಸ್ಕ್ರಿಪ್ಷನ್ ಮೇಲೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ. ಮಲೆನಾಡು ಹಾಗೂ ಸುತ್ತಮುತ್ತಲಿನ ಭಾಗದ ಗ್ರಾಹಕರು ತಮ್ಮ ಹತ್ತಿರದ ರಾಹುಲ್ ಹುಂಡೈ ಅಧಿಕೃತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶಿವಮೊಗ್ಗ: 7795800016 / 7795800013 / 7795800021. ಚಿಕ್ಕಮಗಳೂರು: 7795800018, ತೀರ್ಥಹಳ್ಳಿ: 7795800012, ಸಾಗರ: 6364465334, ಶಿಕಾರಿಪುರ: 6364927726