ಟೆಸ್ಲಾ ಕಾರು: ಭಾರತದಲ್ಲಿ ಮತ್ತೊಂದು ಅನುಭವ ಕೇಂದ್ರ ಆರಂಭ, ಎಲ್ಲಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಆಟೋಮೊಬೈಲ್‌ ನ್ಯೂಸ್‌: ಜಗತ್ತಿನ ಪ್ರಮುಖ ಎಲೆಕ್ಟ್ರಿಕ್ ವಾಹನ (EV) ತಯಾರಿಕಾ ಸಂಸ್ಥೆ ಟೆಸ್ಲಾ, ಭಾರತದಲ್ಲಿ ತನ್ನ ಮಾರುಕಟ್ಟೆ ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಜನರಿಗೆ ಟೆಸ್ಲಾ ಕಾರುಗಳ ಅನುಭವ ನೀಡಲು ಮತ್ತೊಂದು ಅನುಭವ ಕೇಂದ್ರ ಆರಂಭಿಸುತ್ತಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಜೂನ್ 17 ರಂದು ಟೆಸ್ಲಾ ಕಂಪನಿಯ ಹೊಸ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆಗೊಳ್ಳಲಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿದೆ ಎಕ್ಸ್‌ಪೀರಿಯನ್ಸ್‌ ಸೆಂಟರ್?

ಸದ್ಯ ಭಾರತೀಯ ಇವಿ ಮಾರುಕಟ್ಟೆಯಲ್ಲಿ ಟೆಸ್ಲಾ ವಾಹನಗಳ ಮಾರಾಟ ಪ್ರಮಾಣ ಕಡಿಮೆ ಇದೆ. ಹಾಗಾಗಿ ಟೆಸ್ಲಾ ಕಂಪನಿಯು ವ್ಯವಸ್ಥಿತವಾಗಿ ತನ್ನ ನೆಟ್‌ವರ್ಕ್ ಅನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದೆ. ಈಗಾಗಲೇ ನವದೆಹಲಿ, ಗುರುಗ್ರಾಮ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಟೆಸ್ಲಾ ತನ್ನ ಎಕ್ಸ್‌ಪೀರಿಯನ್ಸ್ ಸೆಂಟರ್‌ಗಳನ್ನು ಹೊಂದಿದೆ. ಈಗ ಈ ಸಾಲಿಗೆ ಹೈದರಾಬಾದ್ ಕೂಡ ಸೇರ್ಪಡೆಯಾಗುತ್ತಿದೆ ಎಂದು ರಿಪಬ್ಲಿಕ್‌ ವರ್ಡ್‌ ವರದಿ ಮಾಡಿದೆ.  ‌

AUTOMOBILE-NEWS-THUMBNAIL.

ಟೆಸ್ಲಾದ ಜನಪ್ರಿಯ ಮಾಡಲ್‌ Y

ಟೆಸ್ಲಾ ಸಂಸ್ಥೆಯು ಭಾರತದಲ್ಲಿ ತನ್ನ ಜನಪ್ರಿಯ ಮಾಡಲ್ ವೈ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಮಾತ್ರ ಮಾರಾಟ ಮಾಡುತ್ತಿದೆ. ಗ್ರಾಹಕರನ್ನು ಸೆಳೆಯಲು ಇತ್ತೀಚೆಗಷ್ಟೇ ಭಾರತದಲ್ಲಿ ಟೆಸ್ಲಾ ತನ್ನ ಕಾರುಗಳ ಬೆಲೆ ಕಡಿತಗೊಳಿಸಿತ್ತು. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಐದು ಸೀಟಿನ ಮಾಡಲ್ ವೈ ಪ್ರೀಮಿಯಂ RWD ಆವೃತ್ತಿಯ ಆರಂಭಿಕ ಬೆಲೆ ₹50.89 ಲಕ್ಷ ಆಗಿದ್ದರೆ, ಆರು ಸೀಟುಗಳ ಮಾಡಲ್ ವೈ ಎಲ್ ಪ್ರೀಮಿಯಂ LWD ಆವೃತ್ತಿಯ ಬೆಲೆ ₹61.99 ಲಕ್ಷ ಆಗಿದೆ.

ಈ ಕಾರುಗಳನ್ನು ಚೀನಾದ ಶಾಂಘೈನಲ್ಲಿರುವ ಟೆಸ್ಲಾ ಕಾರ್ಖಾನೆಯಿಂದ ಸಂಪೂರ್ಣವಾಗಿ ಸಿದ್ಧಪಡಿಸಿದ ಸ್ಥಿತಿಯಲ್ಲಿ (CBU) ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈವರೆಗೂ ದೇಶದಲ್ಲಿ 342 ಕಾರುಗಳನ್ನು ಟೆಸ್ಲಾ ಮಾರಾಟ ಮಾಡಿದೆ.