ಶಿವಮೊಗ್ಗದಲ್ಲಿ ಎರಡು ದಿನ ಕಾರುಗಳ ಮೆಗಾ ಎಕ್ಸ್‌ಚೇಂಜ್‌ ಮೇಳ, ಎಲ್ಲಿ? ಎಷ್ಟು ಕಾರುಗಳು ಇರಲಿವೆ?

ಶಿವಮೊಗ್ಗ: ನಗರದ ಶಕ್ತಿ ಟೊಯೋಟಾ ವತಿಯಿಂದ ನಗರದಲ್ಲಿ ಎರಡು ದಿನಗಳ ಕಾಲ ಮೆಗಾ ಎಕ್ಸ್‌ಚೇಂಜ್ ಮತ್ತು ಯೂಸ್ಡ್ ಕಾರ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 8 ಮತ್ತು 9ರಂದು ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಚರ್ಚ್ ಆವರಣದಲ್ಲಿ ಈ ಬೃಹತ್ ಮೇಳ ನಡೆಯಲಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪೂರ್ವ ಸ್ವಾಮ್ಯದ (USED CAR) ಕಾರುಗಳನ್ನು ಖರೀದಿಸಲು ಈ ಮೇಳ ಸುವರ್ಣಾವಕಾಶ ಕಲ್ಪಿಸಲಾಗಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ವಿವಿಧ ಮಾದರಿಯ ಕಾರುಗಳನ್ನು ಇರಿಸಲಾಗುತ್ತಿದೆ. ಗ್ರಾಹಕರು ತಮಗಿಷ್ಟವಾದ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

hakti-cars-pvt-ltd-shimoga-Toyota-showroom

ಮೇಳದ ಹೈಲೈಟ್ಸ್‌

  • ಉತ್ತಮ ಎಕ್ಸ್‌ಚೇಂಜ್ ಮೌಲ್ಯ: ಹಳೆಯ ಕಾರುಗಳಿಗೆ ಅತ್ಯುತ್ತಮ ಮೌಲ್ಯ ಹಾಗೂ ಖಾತರಿಪಡಿಸಿದ ಎಕ್ಸ್‌ಚೇಂಜ್ ಪ್ರಯೋಜನಗಳು ಸಿಗಲಿವೆ.
  • ಸರಳ ಹಣಕಾಸು ನೆರವು: ಆಕರ್ಷಕ ಹಣಕಾಸು ಕೊಡುಗೆಗಳೊಂದಿಗೆ ಕೇವಲ ಶೇ. 7.5ರ ಆರಂಭಿಕ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ.
  • ಶೂನ್ಯ ಡೌನ್ ಪೇಮೆಂಟ್: ಯಾವುದೇ ಮುಂಗಡ ಹಣ ಪಾವತಿಸದೆಯೂ (ZERO DOWN PAYMENT) ಕಾರುಗಳನ್ನು ಖರೀದಿಸುವ ಅವಕಾಶವಿದೆ.
  • ಫ್ಲೆಕ್ಸಿಬಲ್ ಇಎಂಐ: ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 7 ವರ್ಷಗಳವರೆಗಿನ ಸುಲಭ ಇಎಂಐ ಹಾಗೂ ವಾರ್ಷಿಕ ಇಎಂಐ ಪಾವತಿಯ ಆಯ್ಕೆಗಳು ಲಭ್ಯವಿವೆ.

ಇದರೊಂದಿಗೆ, ಸ್ಥಳದಲ್ಲೇ ವಾಹನಗಳ ತ್ವರಿತ ಮೌಲ್ಯಮಾಪನ (INSTAT EVALUATION) ಸೌಲಭ್ಯ ಇರಲಿದೆ. ಮೇಳದಲ್ಲಿ ಕಾರು ಬುಕ್ ಮಾಡುವ ಗ್ರಾಹಕರಿಗೆ ₹5,000 ಮೌಲ್ಯದ ಉಚಿತ ಕಾರ್ ಕೇರ್ ಕಿಟ್ ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಶಕ್ತಿ ಟೊಯೋಟ ತಿಳಿಸಿದೆ.  

ಟೊಯೋಟಾ ಸಂಸ್ಥೆಯ ಮಾದರಿಗಳ ಕಾರುಗಳು ಈ ಪ್ರದರ್ಶನದಲ್ಲಿ ಇರಲಿವೆ. ಜೂನ್ 8 ಮತ್ತು 9ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್‌ ನಂಬರ್‌: 7022979407, 6366231278, 7411654755 ಅಥವಾ 7411654757.