SHIVAMOGGA LIVE NEWS | 10 MARCH 2024
JUST ಮಾಹಿತಿ : ನೈಋತ್ಯ ರೈಲ್ವೆಯ ಭೂಪಟದಲ್ಲಿ ಶಿವಮೊಗ್ಗ ನಿಲ್ದಾಣ ಅತ್ಯಂತ ಪ್ರಮುಖದ್ದಾಗುತ್ತಿದೆ. ರೈಲ್ವೆ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಒಂದಿಲ್ಲೊಂದು ಬೆಳವಣಿಗೆಯಾಗುತ್ತಿದೆ. ಮೀಟರ್‌ಗೇಜ್ ರೈಲ್ವೆ ಮಾರ್ಗದಿಂದ ಬ್ರಾಡ್‌ಗೇಜ್‌ವರೆಗೆ, ಈಗ ವಿದ್ಯುತ್ ಚಾಲಿತ ರೈಲ್ವೆಯ ತನಕ ಎಲ್ಲ ಅತ್ಯಾಧುನಿಕ ವ್ಯವಸ್ಥೆಯನ್ನೂ ಶಿವಮೊಗ್ಗ ಹೊಂದಿದೆ.
![]() |
ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಶುರುವಾದರೆ ಶಿವಮೊಗ್ಗ ರೈಲ್ವೆ ನಿಲ್ದಾಣ ಅತ್ಯಂತ BUSY ನಿಲ್ದಾಣಗಳಲ್ಲಿ ಒಂದಾಗಲಿದೆ. ವಂದೇ ಭಾರತ್ ರೈಲಿಗು ಬೇಡಿಕೆ ಹೆಚ್ಚಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣ, ಇಲ್ಲಿನ ರೈಲ್ವೆ ಮಾರ್ಗಗಳ ಕುರಿತ ಸಂಕ್ಷಿಪ್ತ ಮಾಹಿತಿ, ಇವತ್ತಿನ JUST ಮಾಹಿತಿ ಅಂಕಣದಲ್ಲಿ.
ಶಿವಮೊಗ್ಗ ರೈಲ್ವೆ ಬಗ್ಗೆ ನಿಮಗೆಷ್ಟು ಗೊತ್ತು?
1899ರಲ್ಲಿ ಬೀರೂರಿನಿಂದ ಶಿವಮೊಗ್ಗದ ಬಿದರೆವರೆಗೆ 60.74 ಕಿ.ಮೀ. ಮೀಟರ್ ಗೇಜ್ ರೈಲ್ವೆ ಲೇನ್ ಸ್ಥಾಪಿಸಲಾಯಿತು. ಅದೇ ವರ್ಷ ಡಿಸೆಂಬರ್ 1ರಂದು ಶಿವಮೊಗ್ಗಕ್ಕೆ ಮೊದಲ ಪ್ಯಾಸೆಂಜರ್ ರೈಲು ಆಗಮಿಸಿತು.
1930ರಲ್ಲಿ ಮೈಸೂರು ಸಂಸ್ಥಾನವು ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಾಯಿತು. ಮೊದಲಿಗೆ ಶಿವಮೊಗ್ಗದಿಂದ ರಾಗಿಹೊಸಳ್ಳಿವರೆಗೆ ರೈಲ್ವೆ ಮಾರ್ಗ ಸ್ಥಾಪಿಸಲಾಯಿತು. 1934ರಲ್ಲಿ ಅರಸಾಳು ಮೂಲಕ ಆನಂದಪುರದವರೆಗೆ ಮೀಟರ್‌ಗೇಜ್ ರೈಲ್ವೆ ಮಾರ್ಗ ಸ್ಥಾಪಿಸಲಾಯಿತು. 1938ರಲ್ಲಿ ಸಾಗರಕ್ಕೆ, 1940ರಲ್ಲಿ ತಾಳಗುಪ್ಪಕ್ಕೆ ರೈಲ್ವೆ ಮಾರ್ಗ ವಿಸ್ತರಿಸಿತು.
ತಾಳಗುಪ್ಪವರೆಗೆ ರೈಲ್ವೆ ಮಾರ್ಗ ವಿಸ್ತರಣೆಗೆ ಎರಡು ಪ್ರಮುಖ ಕಾರಣವಿತ್ತು. ಮೊದಲನೆಯದ್ದು, ಜೋಗ ಜಲಪಾತದವರೆಗೆ ತಲುಪಲು ಸುಲಭವಾಗಲಿ ಎಂದು. ಎರಡನೆಯದ್ದು, ಮಲೆನಾಡಿನ ದಟ್ಟ ಅರಣ್ಯದಲ್ಲಿದ್ದ ಬೃಹತ್ ಮರಗಳ ದಿಮ್ಮಿಗಳನ್ನು ಭದ್ರಾವತಿಯ ಮೈಸೂರು ಉಕ್ಕು ಕಾರ್ಖಾನೆಗೆ (ಈಗ ವಿಐಎಸ್‌ಎಲ್) ಸಾಗಿಸಲು ಅನುವಾಗಲಿ ಎಂದು. ಈ ಮರದ ದಿಮ್ಮಿಗಳು ಉಕ್ಕು ಕಾರ್ಖಾನೆಯ ಪಿಗ್ ಐರನ್ ಉತ್ಪಾದನೆ ಫರ್ನೇಸ್‌ಗಳಿಗೆ ಇಂಧನದಂತೆ ಬಳಕೆಯಾಗುತ್ತಿದ್ದವು.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆಗೆ ಇವತ್ತು ಹುಟ್ಟುಹಬ್ಬ, ಕೇಕ್ ಕತ್ತರಿಸಿ ಮಕ್ಕಳಿಂದ ‘ನಿಲ್ದಾಣ ಮಹೋತ್ಸವ’
ಶಿವಮೊಗ್ಗ ರೈಲ್ವೆ ನಿಲ್ದಾಣವು ರೈಲ್ವೆಯ ಎನ್‌ಎಸ್‌ಜಿ 4 ಕೆಟಾಗರಿಯಲ್ಲಿ ಬರಲಿದೆ. 3 ಪ್ಲಾಟ್‌ಫಾರಂಗಳು ಇಲ್ಲಿದೆ. 28 ರೈಲುಗಳು ಈ ನಿಲ್ದಾಣದ ಮೂಲಕ ವಿವಿಧೆಡೆಗೆ ಸಂಚರಿಸುತ್ತಿವೆ. ಸುಮಾರು 11,350 ಪ್ರಯಾಣಿಕರು ಈ ನಿಲ್ದಾಣದ ಮೂಲಕ ನಿತ್ಯ ಪ್ರಯಾಣಿಸುತ್ತಾರೆ. ಪ್ರತಿದಿನ ಅಂದಾಜು 4.15 ಲಕ್ಷ ರೂ. ಆದಾಯ ಗಳಿಸುತ್ತಿದೆ.
ಇದನ್ನೂ ಓದಿ – ಬ್ರಿಟೀಷ್ ಕಾಲದ ನಂತರ ಶಿವಮೊಗ್ಗದಿಂದ ಇದೆ ಮೊದಲು ಹೊಸ ರೈಲ್ವೆ ಮಾರ್ಗ
ಈಚೆಗೆ ಅಮೃತ್ ಭಾರತ್ ನಿಲ್ದಾಣದ ಸ್ಕೀಂಗೆ ಶಿವಮೊಗ್ಗ ರೈಲ್ವ ನಿಲ್ದಾಣ ಆಯ್ಕೆಯಾಗಿದೆ. 24.37 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಯೋಜಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಇದನ್ನೂ ಓದಿ – ಕೋಟಿ ಕೋಟಿ ವೆಚ್ಚದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ, ಏನೆಲ್ಲ ಅಭಿವೃದ್ಧಿಯಾಗುತ್ತೆ? ಇಲ್ಲಿದೆ ಲಿಸ್ಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200