ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಟೆಕ್ನಾಲಜಿ ಸುದ್ದಿ: ಜಪಾನ್ ದೇಶ ಭಾರತದ ಇಂಟರ್ನೆಟ್ (Internet) ವೇಗಕ್ಕಿಂತಲು 16 ಮಿಲಿಯನ್ ಪಟ್ಟು ವೇಗದ ಇಂಟರ್ನೆಟ್ ಬಳಸುತ್ತಿದೆ. 8K ರೆಸಲ್ಯೂಷನ್ ಇರುವ ನೆಟ್ಫ್ಲಿಕ್ಸ್ನ ವಿಡಿಯೋಗಳನ್ನು ಒಂದು ಸೆಕೆಂಡ್ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಜಗತ್ತಿನಲ್ಲಿ ಇಷ್ಟು ವೇಗದ ಇಂಟರ್ನೆಟ್ ಅಮೆರಿಕ ದೇಶದಲ್ಲಿಯು ಇಲ್ಲ.
ಜಪಾನ್ 1.02 ಪೆಟಾಬಿಟ್ಸ್/ಸೆಕೆಂಡ್ (Pbps) ಇಂಟರ್ನೆಟ್ ವೇಗವನ್ನು ಸಾಧಿಸಿ ಹೊಸ ವಿಶ್ವ ದಾಖಲೆ ಮಾಡಿದೆ. ಇದು ಭಾರತದ ಸರಾಸರಿ ವೇಗದ (63.55 Mbps) 1.6 ಕೋಟಿ ಪಟ್ಟು ಹೆಚ್ಚು. ಈ ವೇಗದಲ್ಲಿ ನೆಟ್ಫ್ಲಿಕ್ಸ್ನ ಸಂಪೂರ್ಣ ಲೈಬ್ರರಿ ಅಥವಾ ವಿಕಿಪೀಡಿಯಾವನ್ನು 1 ಸೆಕೆಂಡ್ನಲ್ಲಿ ಡೌನ್ಲೋಡ್ ಮಾಡಬಹುದು.
ಇದನ್ನೂ ಓದಿ » ಏರ್ಟೆಲ್ ಪ್ರೀಪೇಯ್ಡ್ ₹189ನ ಹೊಸ ರೀಚಾರ್ಜ್ ಪ್ಲಾನ್, ಏನೆಲ್ಲ ವಿಶೇಷತೆ ಇದೆ?
NICT (ಜಪಾನ್) ಮತ್ತು ಸುಮಿತೊಮೊ ಎಲೆಕ್ಟ್ರಿಕ್ ಕಂಪನಿ 19-ಕೋರ್ ಫೈಬರ್ ಆಪ್ಟಿಕ್ ಕೇಬಲ್ ಬಳಸಿದ್ದು, ಇದು ಸಾಮಾನ್ಯ ಕೇಬಲ್ ಗಾತ್ರದಲ್ಲೇ ಹೆಚ್ಚು ಡೇಟಾವನ್ನು (1,800 km ದೂರಕ್ಕೆ) ವೇಗವಾಗಿ ರವಾನಿಸುತ್ತದೆ. ಡೇಟಾ ನಷ್ಟವಿಲ್ಲದೆ ಈ ವೇಗವನ್ನು ಸಾಧಿಸಲು ವಿಶೇಷ ಟ್ರಾನ್ಸ್ಮೀಟರ್ಸ್ ಮತ್ತು ರಿಸೀವರ್ಗಳನ್ನು ಬಳಸಲಾಗಿದೆ. ಈ ತಂತ್ರಜ್ಞಾನ ಡೇಟಾ ಸೆಂಟರ್ಗಳು, AI, ಕ್ಲೌಡ್ ಕಂಪ್ಯೂಟಿಂಗ್, ಮತ್ತು 8K ಸ್ಟ್ರೀಮಿಂಗ್ಗೆ ಉಪಯುಕ್ತವಾಗಬಹುದು. ಆದರೆ ಸಾಮಾನ್ಯ ಸ್ಮಾರ್ಟ್ಫೋನ್ಗಳು ಅಥವಾ ರೌಟರ್ಗಳು ಇದನ್ನು ಇನ್ನೂ ಹಿಡಿಯಲು ಸಿದ್ಧವಿಲ್ಲ.

2023ರಲ್ಲಿ NICT 402 ಟೆರಾಬಿಟ್ಸ್ ಪ್ರತಿ ಸೆಕೆಂಡ್ ವೇಗ ಸಾಧಿಸಿತ್ತು. ಹೊಸ ಪ್ರಯೋಗಗಳು 6G ಯುಗಕ್ಕೆ ದಾರಿ ಮಾಡಿಕೊಡುತ್ತಿವೆ. ಭಾರತದಲ್ಲಿ ಇಂಟರ್ನೆಟ್ ವೇಗ 63.55 Mbps, ಅಮೆರಿಕದಲ್ಲಿ 300 Mbps ಇದೆ.
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






