ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
JUST MAHITI, 22 SEPTEMBER 2024 : ಕಾಳಸಂತೆಯಲ್ಲಿ ಈರುಳ್ಳಿ (Onion) ಅಕ್ರಮ ದಾಸ್ತಾನು ಮತ್ತು ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಗ್ರಾಹಕರಿಗೆ ನೇರವಾಗಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಮೊಬೈಲ್ ವ್ಯಾನ್‌ಗೆ ಚಾಲನೆ ನೀಡುತ್ತಿದೆ. ಸೋಮವಾರದಿಂದ ಈರುಳ್ಳಿ ಮಾರಾಟ ಗಾಡಿಗಳು ರಸ್ತೆಗಿಳಿಯಲಿವೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧೀನದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಲಿಮಿಟೆಡ್ (ಎನ್‌ಸಿಸಿಎಫ್) ಮೂಲಕ ಈ ವ್ಯಾನುಗಳು ಸಂಚರಿಸಲಿವೆ. ಬೆಂಬಲ ಬೆಲೆಯಲ್ಲಿ ಅಂದರೆ ಈರುಳ್ಳಿ ಕೆಜಿಗೆ 35 ರೂ. ನಿಗದಿಗೊಳಿಸಲಾಗಿದ್ದು, ಗ್ರಾಹಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಈರುಳ್ಳಿ ಒದಗಿಸುವ ಉದ್ದೇಶವಿದೆ.
ಮುಂಬೈನಲ್ಲಿ ಈಗಾಗಲೇ ರಿಯಾಯಿತಿ ದರದಲ್ಲಿ ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಿಗೆ ಬೆಂಗಳೂರಿನಲ್ಲಿ ವ್ಯಾನ್‌ಗಳನ್ನು ಪರಿಚಯಿಸಲಾಗುತ್ತಿದೆ.
ಇದನ್ನೂ ಓದಿ » ಸುಪ್ರೀಂ ಕೋರ್ಟ್‌ನ ಯು ಟ್ಯೂಬ್ ಖಾತೆ ಹ್ಯಾಕ್, ಈಗ ಪುನಾರಂಭ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422