ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 AUGUST 2023
SHIMOGA : ಬೆಂಗಳೂರು – ಶಿವಮೊಗ್ಗ ನಡುವೆ ಆ.31ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಇಂಡಿಗೋ ವಿಮಾನಗಳು (Indigo Flight) ನಿತ್ಯ ಹಾರಾಟ ನಡೆಸಲಿವೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ.
ಶಿವಮೊಗ್ಗದಲ್ಲಿ ಟ್ರಾವೆಲ್ ಏಜೆನ್ಸಿಗಳಲ್ಲಿ ವಿಮಾನದ (Indigo Flight) ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. ಇದರ ಜೊತೆಗೆ ಆನ್‌ಲೈನ್ ಮೂಲಕ ಮೊಬೈಲ್ ಅಥವಾ ಮನೆಯಲ್ಲೇ ಕಂಪ್ಯೂಟರ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಸುಲಭವಾದ 6 ಸ್ಟೆಪ್‌ಗಳನ್ನು ಇಲ್ಲಿ ಒದಗಿಸಲಾದೆ.
ಏನದು 6 ಸ್ಟೆಪ್?
STEP 1 : ಇಂಟರ್‌ನೆಟ್‌ನಲ್ಲಿ https://www.goindigo.in/ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ. ವಿಮಾನದ ಸೀಟ್ ಬುಕ್ಕಿಂಗ್ ಪೋರ್ಟಲ್ ತೆರೆದುಕೊಳ್ಳಲಿದೆ.
STEP 2 : ಇಂಡಿಗೋ ಸಂಸ್ಥೆಯ ವೆಬ್‌ಸೈಟ್‌ನಲ್ಲಿ FROM ಮತ್ತು TO ಕಾಲಂಗಳನ್ನು ಭರ್ತಿ ಮಾಡಬೇಕು. ಪ್ರಯಾಣದ ದಿನಾಂಕ ಮತ್ತು ಅಗತ್ಯವಿದ್ದರೆ ರಿಟರ್ನ್ ಪ್ರಯಾಣದ ದಿನಾಂಕವನ್ನು ದಾಖಲಿಸಬೇಕು. ಬಳಿಕ SEARCH FLIGHT ಎಂದು ಕ್ಲಿಕ್ ಮಾಡಬೇಕು.
STEP 3 : ಶಿವಮೊಗ್ಗ – ಬೆಂಗಳೂರು ಮಧ್ಯೆ ಒಂದೇ ವಿಮಾನ ಹಾರಾಡುವುದರಿಂದ ಅದರ ಮಾಹಿತಿ ಮಾತ್ರ ವೆಬ್‌ಸೈಟ್‌ನಲ್ಲಿ ತೋರಿಸಲಾಗುತ್ತದೆ. ಮಾಹಿತಿಯ ಕಾಲಂ ಮೇಲೆ ಕ್ಲಿಕ್ ಮಾಡಿದರೆ ಮೂರು ಬಗೆಯ ಸೀಟ್ ಬುಕ್ಕಿಂಗ್ ಮಾದರಿ, ಅವುಗಳ ವಿಶೇಷತೆ ಮತ್ತು ದರ ಕಾಣಿಸಲಿದೆ. BOOK ಎಂದು ಕ್ಲಿಕ್ ಮಾಡಬೇಕು.
STEP 4 : CONTACT DETAILS ಬಾಕ್ಸ್ ಓಪನ್ ಆಗಲಿದೆ. ಅಲ್ಲಿ ಮೊಬೈಲ್ ನಂಬರ್, ಈ ಮೇಲ್ ಐಡಿ ದಾಖಲು ಮಾಡಿ NEXT ಎಂದು ಕ್ಲಿಕ್ ಮಾಡಬೇಕು.
STEP 5 : ಮುಂದಿನ ಪುಟದಲ್ಲಿ ಪ್ರಯಾಣಿಕರ ಹೆಸರು ದಾಖಲಿಸಬೇಕು. ವೀಲ್ ಚೇರ್‌ನ ಅಗತ್ಯವಿದ್ದರೆ ಇಲ್ಲಿ ಕ್ಲಿಕ್ ಮಾಡುವ ಅವಕಾಶವಿದೆ. ಮುಂದಿನ ಪುಟದಲ್ಲಿ ವಿಮಾನದಲ್ಲಿ ತಿಂಡಿ, ತಿನಿಸುಗಳನ್ನು ಆರ್ಡರ್ ಮಾಡಬೇಕಿದ್ದರೆ, ಟಿಕೆಟ್ ಕ್ಯಾನ್ಸಲೇಷನ್ ಸೇರಿದಂತೆ ವಿವಿಧ ಮಾಹಿತಿ ಇರಲಿದೆ. ಅಗತ್ಯವಿದ್ದರೆ ದಾಖಲಿಸಬಹುದು. ಇಲ್ಲವಾದಲ್ಲಿ CONTINUE TO SEAT SELECT ಬಟನ್ ಕ್ಲಿಕ್ ಮಾಡಬಹುದು.
STEP 6 : ಸೀಟ್ ಆಯ್ಕೆ ಮಾಡುವ ಪುಟ ತೆರೆದುಕೊಳ್ಳಲಿದೆ. ಅಲ್ಲಿ ನಿಮ್ಮ ಇಷ್ಟದ ಸೀಟ್ ಸೆಲೆಕ್ಟ್ ಮಾಡಬಹುದು. ಬಳಿಕ NEXT ಬಟನ್ ಕ್ಲಿಕ್ ಮಾಡಬೇಕು. ಟಿಕೆಟ್ ದರ ಪಾವತಿಸುವ ಪುಟ ತೆರೆದುಕೊಳ್ಳಲಿದೆ. ವಿವಿಧ ಬಗೆಯ ಪೇಮೆಂಟ್ ಆಯ್ಕೆಗಳಿವೆ. ಗೂಗಲ್ ಪೇ, ಫೋನ್ ಪೇ ಮೂಲಕವು ಹಣ ಪಾವತಿಸಬಹುದಾಗಿದೆ. ಬಳಿಕ PAY NOW ಎಂದು ಕ್ಲಿಕ್ ಮಾಡಿದರೆ ಟಿಕೆಟ್ ಬುಕ್ ಆಗಲಿದೆ.
ಇದನ್ನೂ ಓದಿ – GOOD NEWS | ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕೆಟ್ ರೇಟ್ ಇಳಿಕೆ, ಈವರೆಗೂ ಎಷ್ಟಾಗಿದೆ ಬುಕಿಂಗ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422