ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
NAMMURU SHIVAMOGGA | ರಾಜವಂಶಗಳು ಆಡಳಿತ ಸುಧಾರಣೆಗಾಗಿ ಶಿವಮೊಗ್ಗದ ವಿವಿಧೆಡೆ ಆಡಳಿತ ಕೇಂದ್ರ, ತಾಲೂಕುಗಳನ್ನು ರಚಿಸಿದ್ದವು. ಕೊನೆಗೆ ಇವೆಲ್ಲವು ಒಗ್ಗೂಡಿ ಅಖಂಡ ಶಿವಮೊಗ್ಗ ರಚನೆಯಾಯಿತು. ಇವತ್ತು ಹೋಬಳಿ ಕೇಂದ್ರಗಳಾಗಿರುವ ಪ್ರದೇಶಗಳು ಆಗ ತಾಲೂಕುಗಳಾಗಿದ್ದವು. ಪ್ರಮುಖ ಕೇಂದ್ರ ಸ್ಥಾನವಾಗಿದ್ದವು.
ನಗರ ವಿಭಾಗಕ್ಕೆ ಸೇರಿತ್ತು ಶಿವಮೊಗ್ಗ
ಟಿಪ್ಪು ಸುಲ್ತಾನ್ ಯುಗಾಂತ್ಯದ ನಂತರ ಈಗಿನ ಶಿವಮೊಗ್ಗ ಜಿಲ್ಲೆ ಮೈಸೂರು ಒಡೆಯರ್‌ಗಳ ಆಳ್ವಿಕೆಗೆ ಒಳಪಟ್ಟಿತು. ನಗರ (ಈಗಿನ ಹೊಸನಗರದ ನಗರ) ಈ ಭಾಗದ ಫೌಜ್ದಾರಿಯಾಗಿ ಮುಂದುವರೆಯಿತು. ಶಿವಮೊಗ್ಗ ಮತ್ತು ಕಡೂರು ಜಿಲ್ಲೆಗಳನ್ನು ಈ ಫೌಜ್ದಾರಿಗೆ ಸೇರಿಸಲಾಯಿತು. 1862ರಲ್ಲಿ ಶಿವಮೊಗ್ಗ, ಕಡೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಸೇರಿಸಿ ನಗರ ವಿಭಾಗ ಸ್ಥಾಪಿಸಲಾಗಿತ್ತು. ಈ ಅವಧಿಯಲ್ಲಿ ಕುಂಸಿ ಹೋಬಳಿಯನ್ನು ಶಿವಮೊಗ್ಗದ ಉಪ ತಾಲೂಕು ಎಂದು ಘೋಷಿಸಲಾಗಿತ್ತು.
ಕವಲೆದುರ್ಗವಾಗಿತ್ತು ತೀರ್ಥಹಳ್ಳಿ
ಈಗ ತೀರ್ಥಹಳ್ಳಿ ಅತ್ಯಂತ ಜನಪ್ರಿಯ ತಾಲೂಕು. ಆದರೆ 1882ರವರೆಗೆ ಈ ತಾಲೂಕನ್ನು ಕವಲೆದುರ್ಗ ಎಂದು ಕರೆಯಲಾಗುತ್ತಿತ್ತು. ಆ ಬಳಿಕ ತೀರ್ಥಹಳ್ಳಿ ಎಂಬ ಹೆಸರು ಬಂತು.
ತಾಲೂಕಾಗಿತ್ತು ಈಗಿನ ಆನಂದಪುರ
ಅನಂತಪುರ (ಈಗಿನ ಆನಂದಪುರ) ಈ ಭಾಗದ ಪ್ರಮುಖ ತಾಲೂಕಾಗಿತ್ತು. 1832ರಲ್ಲಿ ನಗರ ತಾಲೂಕು ವಿಸ್ತರಣೆ ಸಂದರ್ಭ ಅನಂತರಪುರ ತಾಲೂಕನ್ನು ಅದರಲ್ಲಿ ವಿಲೀನಗೊಳಿಸಲಾಗಿತ್ತು. ಆದರೆ 1857ರಲ್ಲಿ ಅನಂತಪುರ ತಾಲೂಕನ್ನು ಪುನರ್ ಸ್ಥಾಪಿಸಲಾಗಿತ್ತು. ಕೊನೆಗೆ 1875ರಲ್ಲಿ ಸಾಗರ ತಾಲೂಕಿನಲ್ಲಿ ಅನಂತಪುರ ವಿಲೀನವಾಯಿತು.
ಇದನ್ನೂ ಓದಿ – ಈಗ ಸಾಮಾನ್ಯ ಗ್ರಾಮ, ಆಗ ರಾಜಧಾನಿ, ಶಿವಮೊಗ್ಗದ ಯಾವೆಲ್ಲ ಗ್ರಾಮ ಆಡಳಿತ ಕೇಂದ್ರವಾಗಿದ್ದವು? – ನಮ್ಮೂರು ಶಿವಮೊಗ್ಗ
ನಗರದ ಆಡಳಿತ ಕೇಂದ್ರ ಕಲ್ಲೂರುಕಟ್ಟೆಗೆ
ಕೆಳದಿ ಅರಸರು, ಹೈದರಾಲಿ, ಟಿಪ್ಪು ಸುಲ್ತಾನ್ ಕಾಲದಲ್ಲಿ ನಗರ ಪ್ರಮುಖ ಆಡಳಿತ ಕೇಂದ್ರವಾತ್ತು. ಆದರೆ 1875ರ ನಂತರ ನಗರದ ಪ್ರಧಾನ ಸ್ಥಳವನ್ನು ಬದಲಾಯಿಸಲಾಯಿತು. ಆಡಳಿತ ಕೇಂದ್ರವನ್ನು ನಗರದ ಬದಲು ಸಮೀಪದ ಕಲ್ಲೂರುಕಟ್ಟೆಗೆ ವರ್ಗಾಯಿಸಲಾಯಿತು. ಆ ಸ್ಥಳ ಈಗ ಹೊಸನಗರ ಎಂದು ಬದಲಾಗಿದೆ.
ಶಿವಮೊಗ್ಗ, ಭದ್ರಾವತಿ ತಾಲೂಕುಗಳ ರಚನೆ
1941ರ ನಂತರ ಆಡಳಿತ ಸುಧಾರಣೆಗಾಗಿ ಭದ್ರಾವತಿ ತಾಲೂಕು ರಚಿಸಲಾಯಿತು. ಭದ್ರಾವತಿ ಹೋಬಳಿ, ಕೂಡ್ಲಿಗೆರೆ ಹೋಬಳಿ, ಹೊಳೆಹೊನ್ನೂರು ಹೋಬಳಿಯ 20 ಗ್ರಾಮಗಳನ್ನು ಸೇರಿಸಿ ಭದ್ರಾವತಿ ಎಂಬ ನೂತನ ತಾಲೂಕು ರಚಿಸಲಾಯಿತು. ಇದೆ ಅವಧಿಯಲ್ಲಿ ಕುಂಸಿ ಉಪ ತಾಲೂಕನ್ನು ಶಿವಮೊಗ್ಗ ತಾಲೂಕಿನ ಜೊತೆಗೆ ವಿಲೀನಗೊಳಿಸಲಾಯಿತು.
ಇದನ್ನೂ ಓದಿ – ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಗೊತ್ತಿರಬೇಕಾದ 2 ಸಂಗತಿ | ನಮ್ಮೂರು ಶಿವಮೊಗ್ಗ
ಹಂತ ಹಂತವಾಗಿ ಶಿವಮೊಗ್ಗ ಜಿಲ್ಲೆ ರಚನೆಯಾಯಿತು. 9 ತಾಲೂಕುಗಳನ್ನು ಜಿಲ್ಲೆ ಒಳಗೊಂಡಿತ್ತು. ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬ, ಶಿಕಾರಿಪುರ ತಾಲೂಕುಗಳ ಸಹಿತ ಶಿವಮೊಗ್ಗ ಜಿಲ್ಲೆಯಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422