ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 MAY 2023
SHIMOGA : ಕ್ಯಾತಸಂದ್ರ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಇಂಜಿಯರಿಂಗ್ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಮೇ 23ರಂದು ಹಲವು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳು (Intercity) ತುಮಕೂರಿನ ತನಕ ಮಾತ್ರ ಸಂಚರಿಸಲಿವೆ ಎಂದು ನೃಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗದ ಯಾವ ರೈಲಿಗೆ ತೊಂದರೆ?
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು (ರೈಲು ಸಂಖ್ಯೆ 20652) ಸಂಚಾರವನ್ನು ತುಮಕೂರಿಗೆ ಸೀಮಿತಗೊಳಿಸಲಾಗಿದೆ. ಮೇ 23ರಂದು ಇಂಟರ್ ಸಿಟಿ ರೈಲು (Intercity) ಎಂದಿನಂತೆ ಬೆಳಗ್ಗೆ 5.15ಕ್ಕೆ ತಾಳುಗಪ್ಪದಿಂದ ಹೊರಡಲಿದೆ. ಬೆಳಗ್ಗೆ 7.05ಕ್ಕೆ ಶಿವಮೊಗ್ಗ ನಿಲ್ದಾಣದಿಂದ ತೆರಳಲಿದೆ. ಬೆಳಗ್ಗೆ 10.22ಕ್ಕೆ ತುಮಕೂರು ನಿಲ್ದಾಣ ತಲುಪಲಿದೆ. ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವುದಿಲ್ಲ. ಮೇ 23ರಂದು ಮಾತ್ರ ಈ ರೀತಿ ಇರಲಿದೆ.
ಬೇರೆ ಬೇರೆ ಜಿಲ್ಲೆಯ ರೈಲಿಗಳಿಗು ನಿರ್ಬಂಧ
ಚಿಕ್ಕಮಗಳೂರು – ಯಶವಂತಪುರ (ರೈಲು ಸಂಖ್ಯೆ 16239), ಯಶವಂತಪುರ – ಚಿಕ್ಕಮಗಳೂರು (ರೈಲು ಸಂಖ್ಯೆ 16240), ಬೆಂಗಳೂರು – ಮೈಸೂರು ಒಡೆಯರ್ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಮೇ.23ರಂದು ಸ್ಥಗಿತಗೊಳಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಇನ್ನು, ಬೆಂಗಳೂರು ತುಮಕೂರು ಮೆಮು ಎಕ್ಸ್ ಪ್ರೆಸ್ ರೈಲು ದೊಡ್ಡಬೆಲೆವರೆಗೆ ಮಾತ್ರ ಸಂಚರಿಸಲಿದೆ. ತುಮಕೂರು – ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ರೈಲು ಸಂಚಾರ ಆ ದಿನ ದೊಡ್ಡಬೆಲೆಯಿಂದಲೆ ಆರಂಭವಾಗಲಿದೆ.
ಇದನ್ನೂ ಓದಿ – ಅರ್ಧ ದಾರಿಗೆ ಪ್ರಯಾಣಿಕರನ್ನು ಇಳಿಸಿ ಗ್ಯಾರೇಜ್‌ಗೆ ಹೋದ ಕೆಎಸ್‌ಆರ್‌ಟಿಸಿ ಬಸ್
ಬೆಂಗಳೂರು – ಧಾರವಾಡ (ರೈಲು ಸಂಖ್ಯೆ 12725) ಸಿದ್ದಗಂಗ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ ಹೊರಡುವ ಬದಲು ಆ ದಿನ ತುಮಕೂರಿನಿಂದ ಸಂಚಾರ ಆರಂಭಿಸಲಿದೆ. ಧಾರವಾಡ – ಬೆಂಗಳೂರು (ರೈಲು ಸಂಖ್ಯೆ 12726) ಸಿದ್ದಗಂಗಾ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚಾರ ಮಾಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422