ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್‌ ನೀತಿ

KSRTC ಸುದ್ದಿ: ಇನ್ಮುಂದೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯಲು ಅವಕಾಶವಿಲ್ಲ. KSRTCಯು ಲಗೇಜ್‌ ನೀತಿ ಜಾರಿಗೊಳಿಸಿದೆ. ನಿಗದಿತ ತೂಕಕ್ಕಿಂತಲು ಹೆಚ್ಚಿನ ಭಾರದ ಲಗೇಜ್‌ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ » ಫೋನ್‌ ಪೇಯಲ್ಲಿ ಕರೆಂಟ್‌ ಬಿಲ್‌ ಕಟ್ಟಿದ ಶಿವಮೊಗ್ಗದ ವಕ್ತಿಗೆ ಸ್ವಲ್ಪ ಹೊತ್ತಿಗೆ ಕಾದಿತ್ತು ಶಾಕ್

ವಿಮಾನ ಮತ್ತು ರೈಲುಗಳಲ್ಲಿ ಲಗೇಜ್‌ ನೀತಿ ಇದೆ. ನಿಗದಿಗಿಂತಲು ಹೆಚ್ಚಿನ ತೂಕದ ಲಗೇಜ್‌ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ಇನ್ಮುಂದೆ KSRTC ಬಸ್ಸುಗಳಲ್ಲಿಯು ಲಗೇಜ್‌ ನೀತಿ ಪಾಲಿಸಬೇಕಾಗುತ್ತದೆ.

ಏನೇನೆಲ್ಲ ಕೊಂಡೊಯ್ಯಬಹುದು?

ಲಗೇಜ್‌ ನೀತಿ ಅನ್ವಯ ಪ್ರಯಾಣಿಕರು ಇನ್ಮುಂದೆ ಹಲವು ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿದೆ. ವೈಯಕ್ತಿಕ ಲಗೇಜು ಮಾತ್ರವಲ್ಲದೆ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಕಬ್ಬಿಣದ ಪೈಪ್‌, ಟೈರ್‌ಗಳು, ಪ್ರಾಣಿ – ಪಕ್ಷಿಗಳನ್ನು ಕೂಡ ಸಾಗಿಸಬಹುದು. ಪ್ರಾಣ – ಪಕ್ಷಿಗಳನ್ನು ಸುರಕ್ಷಿತವಾದ ಪೆಟ್ಟಿಗೆ ಅಥವಾ ಕೇಜ್‌ನಲ್ಲಿ ಕೊಂಡೊಯ್ಯಬೇಕು.

ಉಚಿತ ಲಗೇಜ್‌ಗೆ ತೂಕ ನಿಗದಿ

ಇನ್ನು, ಉಚಿತವಾಗಿ ಲಗೇಜ್‌ ಕೊಂಡೊಯ್ಯಲು ಅವಕಾಶವಿದೆ. ಆದರೆ ಅದಕ್ಕು ಮಿತಿ ಇರಲಿದೆ. ವಯಸ್ಕರು 30 ಕೆ.ಜಿ. ತೂಕದ ಲಗೇಜ್‌, ಮಕ್ಕಳು 15 ಕೆ.ಜಿ. ತೂಕದವರೆಗೆ ಉಚಿತವಾಗಿ ಲಗೇಜ್‌ ಕೊಂಡೊಯ್ಯಬಹುದು. ಬಟ್ಟೆ, ಪುಸ್ತಕಗಳು, ಅಗತ್ಯ ಆಹಾರ ಮತ್ತು ಇತರೆ ವಯಕ್ತಿಕ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ.

KSRTC-Bus-General-Image

ಒಂದು ವೇಳೆ ನಿಗದಿತ ತೂಕಕ್ಕಿಂತಲು ಹೆಚ್ಚಿನ ಭಾರದ ಲಗೇಜ್‌ ಇದ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ತೂಕಕ್ಕೆ ತಕ್ಕ ಹಾಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

Leave a Comment