ರೈಲ್ವೆ ಸುದ್ದಿ: ಹಬ್ಬನಘಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್‌ನಿಂದಾಗಿ ಈ ಹಿಂದೆ ಕೆಲವು ರೈಲುಗಳ (Train) ಸಂಚಾರ ರದ್ದು, ಭಾಗಶಃ ರದ್ದು ಮತ್ತು ನಿಯಂತ್ರಿಸಲಾಗಿತ್ತು. ಈ ಪೈಕಿ ಕೆಲವು ರೈಲು ಸೇವೆ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೂರು ರೈಲು ವೇಳಾಪಟ್ಟಿಯಂತೆ ಸಂಚಾರ
» ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್
ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ರದ್ದುಗೊಳಿಸಲಾಗಿತ್ತು. ಈಗ ಈ ರೈಲು (Train) ಎಂದಿನಂತೆ ಅರಸೀಕೆರೆಯಿಂದ ಮೈಸೂರಿಗೆ ತನ್ನ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.
» ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್
ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿತ್ತು. ಈಗ ಈ ರೈಲು ಮೈಸೂರಿನಿಂದ ಹೊರಟು ಶಿವಮೊಗ್ಗ ಟೌನ್‌ವರೆಗೆ ತನ್ನ ಪೂರ್ಣ ಮಾರ್ಗದಲ್ಲಿ ಸಂಚರಿಸಲಿದೆ.

» ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್
ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿತ್ತು. ಈಗ ಈ ರೈಲು ಮೈಸೂರಿನಿಂದ ಹೊರಟು ತಾಳಗುಪ್ಪದವರೆಗೆ ತನ್ನ ನಿಗದಿತ ವೇಳಾಪಟ್ಟಿಯಂತೆ ಚಲಿಸಲಿದೆ.
ಇದನ್ನೂ ಓದಿ » ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಬಳಿ ಹೋಮ್ ಗಾರ್ಡ್ ಮೇಲೆ ಹಲ್ಲೆ, ಆಟೋ ಚಾಲಕ ಅರೆಸ್ಟ್, ಏನಿದು ಕೇಸ್?

