ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAILWAY NEWS, 19 OCTOBER 2024 : ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (Jan Shatabdi) ಮತ್ತು ಹುಬ್ಬಳ್ಳಿ – ಬೆಂಗಳೂರು ಜನ ಶತಾಬ್ದಿ ರೈಲುಗಳು ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿಯು ನಿಲುಗಡೆ ನೀಡಲಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಕುರಿತು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಟ್ವೀಟ್ ಮಾಡಿದ್ದಾರೆ. ಇದರಿಂದ ಇವರೆಡೂ ರೈಲುಗಳಿಗೆ ಹೊಸತೊಂದು ಸ್ಟಾಪ್ ಸೇರಿಸಿದಂತಾಗಿದೆ.
ಈ ಜನ ಶತಾಬ್ದಿ ರೈಲುಗಳಿಗೆ ತಿಪಟೂರಿನಲ್ಲಿ ನಿಲುಗಡೆ ನೀಡಬೇಕೆಂಬುದು ತಿಪಟೂರು ಜನತೆಯ ಬಹುದಿನದ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ.
ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
» ಶಿವಮೊಗ್ಗ ಜನಶತಾಬ್ದಿಗೆ ಎಷ್ಟು ಸ್ಟಾಪ್ ಇದೆ?
ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ರೈಲು ಪ್ರತಿ ದಿನ ಬೆಳಗ್ಗೆ 5.15ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸಿಕೆರೆ, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ಇತ್ತು. ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ.
ಇದನ್ನೂ ಓದಿ » ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಣ, ಕಾರಣವೇನು?
ಸಂಜೆ 5.15ಕ್ಕೆ ಮೆಜೆಸ್ಟಿಕ್‌ನಿಂದ ಹೊರಡುವ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗ ತಲುಪಲಿದೆ. ಈ ಮಾರ್ಗದಲ್ಲಿಯು ಜನ ಶತಾಬ್ದಿ ರೈಲು ಇವೇ ನಿಲ್ದಾಣಗಳಲ್ಲಿ ಸ್ಟಾಪ್ ನೀಡುತ್ತಿತ್ತು. ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿಯು ರೈಲು ಸ್ಟಾಪ್ ನೀಡಲಿದೆ.
ಇದನ್ನೂ ಓದಿ » ರೈಲ್ವೆ ಟಿಕೆಟ್ ಬುಕಿಂಗ್, ನವೆಂಬರ್ 1ರಿಂದ ಹೊಸ ನಿಯಮ ಜಾರಿಗೆ