ರೈಲ್ವೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಮಹ್ವತದ ಬದಲಾವಣೆ, ಪ್ರಯೋಗ ಆರಂಭ, ಏನಿದು?

ರೈಲ್ವೆ ನ್ಯೂಸ್‌: ತತ್ಕಾಲ್‌ ಟಿಕೆಟ್‌ (Tatkal Ticket) ಬುಕಿಂಗ್‌ನಲ್ಲಿ ನಡೆಯುತ್ತಿದ್ದ ವಂಚನೆ ತಡೆಗಟ್ಟಲು ಮತ್ತು ಏಜೆಂಟರಿಗೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಮುಂದೆ ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ ಕೌಂಟರ್‌ಗಳಿಂದ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ, ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿಯನ್ನು ತಿಳಿಸಿದ ನಂತರವೇ ಟಿಕೆಟ್ ನೀಡಲಾಗುತ್ತದೆ. ರಾಣಿ ಕಮಲಾಪತಿ ನಿಲ್ದಾಣದಿಂದ ದೆಹಲಿಗೆ ಹೋಗುವ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊದಲು ಜಾರಿಗೆ ತರಲಾಗಿದೆ.

Tatkal Ticket ಹೊಸ ಪದ್ಧತಿಗೆ ಕಾರಣವೇನು?

ರೈಲ್ವೆ ಟಿಕೆಟ್‌ ಕೌಂಟರ್‌ ತೆರೆಯುತ್ತಿದ್ದಂತೆ ಅನೇಕ ತತ್ಕಾಲ್‌ ಟಿಕೆಟ್‌ಗಳು ಬುಕ್‌ ಆಗುತ್ತಿದ್ದವು. ಆ ಬಳಿಕ ಟಿಕೆಟ್‌ಗಳನ್ನು ಹೆಚ್ಚಿನ ಕಮಿಷನ್‌ಗೆ ಮಾರಾಟ ಮಾಡಲಾಗುತ್ತಿತ್ತು. ಇಂತಹ ಏಜೆಂಟರ ಹಾವಳಿಗೆ ಕಡಿವಾಣ ಹಾಕಲು ರೈಲ್ವೆ ಅಧಿಕಾರಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ.

Prayanikare-Gamanisi-Indian-Railway-News

ಹೇಗಿರುತ್ತೆ ಹೊಸ ಮಾರ್ಗ?

ಪಾಯಿಂಟ್‌ 1: ಒಬ್ಬ ವ್ಯಕ್ತಿಯು ಒಂದು ಮೊಬೈಲ್ ಸಂಖ್ಯೆಯಿಂದ ಒಂದು ಸಮಯದಲ್ಲಿ ಕೇವಲ ಒಂದು ತತ್ಕಾಲ್ ಟಿಕೆಟ್ ಅನ್ನು ಮಾತ್ರ ಕಾಯ್ದಿರಿಸಲು ಸಾಧ್ಯ. ಇದರಿಂದ ಪ್ರಯಾಣಿಕರ ಗುರುತು ಖಚಿತವಾಗುತ್ತದೆ.

ಪಾಯಿಂಟ್‌ 2: ತತ್ಕಾಲ್ ಬುಕಿಂಗ್‌ನಲ್ಲಿ ನಡೆಯುತ್ತಿದ್ದ ವಂಚನೆ ಮತ್ತು ಅಕ್ರಮಗಳು ನಿಲ್ಲುತ್ತವೆ. ನಿಜವಾಗಿಯು ಅಗತ್ಯ ಇರುವವರಿಗೆ ಟಿಕೆಟ್‌ ದೊರೆಯಲಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿನಿಮಾ ನಿರ್ದೇಶಕ ನಿಧನ, ಆಸ್ಪತ್ರೆಗೆ ದೌಡಾಯಿಸಿದ ನಟ ಸಂಜು ಬಸಯ್ಯ

ಯಶಸ್ವಿಯಾದರೆ ದೇಶಾದ್ಯಂತ ಜಾರಿ

ಶತಾಬ್ದಿ ಎಕ್ಸ್‌ಪ್ರೆಸ್‌ನ ಒಟ್ಟು 1500 ಆಸನಗಳಿವೆ. ಸದ್ಯ ಶೇ.30ರಷ್ಟು ಅಂದರೆ 450 ಆಸನಗಳನ್ನು ಒಟಿಪಿ ಆಧಾರಿತ ತತ್ಕಾಲ್ ಕೋಟಾದಡಿ ಸೇರಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ, ದೇಶಾದ್ಯಂತ ಇತರ ರೈಲುಗಳ ಕಾಯ್ದಿರಿಸುವಿಕೆಗೂ ಈ ಒಟಿಪಿ ವ್ಯವಸ್ಥೆ ವಿಸ್ತರಿಸಲಾಗುವುದು ಎಂದು ರೈಲ್ವೇ ಇಲಾಖೆ ತಿಳಿಸಿದೆ.

Leave a Comment