ಶಿವಮೊಗ್ಗದಿಂದ ಬೆಂಗಳೂರು ರೈಲು ಟೈಮಿಂಗ್‌, ಎಷ್ಟು ರೈಲುಗಳಿವೆ? ಟೈಮಿಂಗ್‌ ಏನೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 NOVEMBER 2023

RAILWAY TIMING : ಶಿವಮೊಗ್ಗ ಮತ್ತು ಬೆಂಗಳೂರು ನಡುವೆ 5 ರೈಲುಗಳು ಸಂಚರಿಸುತ್ತವೆ. ಒಂದು ರೈಲು ಹೊರತು ಉಳಿದೆಲ್ಲವು ವಾರ ಪೂರ್ತಿ ಸೇವೆ ಒದಗಿಸುತ್ತವೆ. ಈ ರೈಲುಗಳು ಪ್ರತಿದಿನ ಭರ್ತಿಯಾಗಿ ತೆರಳುತ್ತವೆ. ವೀಕೆಂಡ್‌ ಹೊತ್ತಲ್ಲಿ ಈ ರೈಲುಗಳಿಗೆ ಭಾರಿ ಡಿಮಾಂಡ್‌ ಇರಲಿದೆ.

ಶಿವಮೊಗ್ಗದಿಂದ ನೇರವಾಗಿ ಹೊರಡುವ ರೈಲುಗಳು

ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ – ರೈಲು ಸಂಖ್ಯೆ 12090 – ಬೆಳಗ್ಗೆ 5.15ಕ್ಕೆ ಹೊರಡಲಿದೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.

ಶಿವಮೊಗ್ಗ – ಯಶವಂತಪುರ – ರೈಲು ಸಂಖ್ಯೆ 16580 – ಮಧ್ಯಾಹ್ನ 3.45ಕ್ಕೆ ಹೊರಡಲಿದೆ. ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.

ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ – ರೈಲು ಸಂಖ್ಯೆ 16582 – ವಾರದಲ್ಲಿ ಮೂರು ದಿನ ಭಾನುವಾರ, ಮಂಗಳವಾರ ಮತ್ತು ಗುರುವಾರ ಮಾತ್ರ ಸಂಚರಿಸಲಿದೆ – ರಾತ್ರಿ 11.55ಕ್ಕೆ ಹೊರಡಲಿದೆ. ಬೆಳಗ್ಗೆ 5 ಗಂಟೆಗೆ ಯಶವಂತಪುರ ತಲುಪಲಿದೆ.

ತಾಳಗುಪ್ಪದಿಂದ ಶಿವಮೊಗ್ಗ ಮೂಲಕ ಬೆಂಗಳೂರು ರೈಲುಗಳು

ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್‌ – ರೈಲು ಸಂಖ್ಯೆ 20652 – ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಬೆಳಗ್ಗೆ 7.05ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 11.55ಕ್ಕೆ ಬೆಂಗಳೂರು ತಲುಪಲಿದೆ.

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ – ರೈಲು ಸಂಖ್ಯೆ 16228 – ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ರಾತ್ರಿ 11 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 4.50ಕ್ಕೆ ಬೆಂಗಳೂರು ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ತಲುಪಲಿದೆ.

ಇದನ್ನೂ ಓದಿ – ಗುಡ್‌ ನ್ಯೂಸ್‌, ವಂದೇ ಭಾರತ್‌ ರೀತಿಯ ಮತ್ತೊಂದು ರೈಲು ರೆಡಿ, ಟಿಕೆಟ್‌ ದರ ಕಡಿಮೆ, ಹೇಗಿದೆ ಹೊಸ ರೈಲು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment