ಶಿವಮೊಗ್ಗದಿಂದ ಮೈಸೂರಿಗೆ ಎಷ್ಟು ರೈಲುಗಳಿವೆ? ಟೈಮಿಂಗ್‌ ಏನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

RAILWAY NEWS, 4 NOVEMBER 2024 : ಶಿವಮೊಗ್ಗ – ಮೈಸೂರು ಮಧ್ಯೆ ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ. ಈ ಮಾರ್ಗದಲ್ಲಿ ನಾಲ್ಕು ರೈಲುಗಳು (Trains) ನಿತ್ಯ ಸಂಚರಿಸುತ್ತವೆ.

ಯಾವ್ಯಾವ ರೈಲು ಎಷ್ಟೊತ್ತಿಗೆ ಹೋಗುತ್ತವೆ?

ಬೆಳಗ್ಗೆ 8.15ಕ್ಕೆ ಕುವೆಂಪು ಎಕ್ಸ್‌ಪ್ರೆಸ್‌ ರೈಲು ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ಈ ರೈಲು ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ಜಂಕ್ಷನ್‌ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ.

Shimoga-Yeshwanthapura-Trains-South-Western-Railway

ಬೆಳಗ್ಗೆ 11.15 ಗಂಟೆಗೆ ಶಿವಮೊಗ್ಗದಿಂದ ಮೈಸೂರು ಎಕ್ಸ್‌ಪ್ರೆಸ್‌ ಹೊರಡಲಿದೆ. ಸಂಜೆ 4.50ಕ್ಕೆ ಮೈಸೂರು ತಲುಪಲಿದೆ. ಹಾಸನ, ಹೊಳೆನರಸೀಪುರ ಮೂಲಕ ಮೈಸೂರಿಗೆ ಸಂಚರಿಸಲಿದೆ.

ಸಂಜೆ 4.45ಕ್ಕೆ ಶಿವಮೊಗ್ಗದಿಂದ ಹೊರಡಲಿರುವ ಇಂಟರ್‌ಸಿಟಿ ರೈಲು ರಾತ್ರಿ 10.30ಕ್ಕೆ ಮೈಸೂರು ತಲುಪಲಿದೆ. ಈ ರೈಲು ಕೂಡ ಹಾಸನ, ಹೊಳೆನರಸೀಪುರ ಮೂಲಕ ಮೈಸೂರಿಗೆ ತೆರಳಲಿದೆ.

ರಾತ್ರಿ 11 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಇದೇ ರೈಲು ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ಬೆಂಗಳೂರು ಮೂಲಕ ರಾತ್ರಿ ಬೆಳಗ್ಗೆ 8.20ಕ್ಕೆ ಮೈಸೂರು ತಲುಪಲಿದೆ.

ಇದನ್ನೂ ಓದಿ » ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ, ಟೈಮಿಂಗ್‌ ಏನು?

RED-LINE-

Shivamogga-Mysuru route sees high passenger traffic, with four daily trains. Kuvempu Express, Mysuru Express, Intercity Trains operate on fixed schedules, but contact railway authorities for updates on timings and changes.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment