ಮೈಸೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರದ 3 ರೈಲುಗಳು 2 ದಿನ ರದ್ದು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 14 NOVEMBER 2023
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

SHIMOGA : ಶಿವಮೊಗ್ಗ – ತುಮಕೂರು ರೈಲು ಸೇರಿ 6 ರೈಲುಗಳ ಸಂಚಾರವನ್ನು ನ.15 ಮತ್ತು 16ರಂದು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವೆಲ್ಲ ರೈಲು ಯಾವಾಗ ಸಂಚಾರ ರದ್ದು?

ನ.15ರಂದು ರದ್ದಾದ ರೈಲುಗಳು

ಮೈಸೂರು – ಚಾಮರಾಜನಗರ (ರೈಲು ಸಂಖ್ಯೆ 07327), ಚಾಮರಾಜನಗರ – ತುಮಕೂರು (ರೈಲು ಸಂಖ್ಯೆ 07345), ತುಮಕೂರು – ಶಿವಮೊಗ್ಗ (ರೈಲು ಸಂಖ್ಯೆ 16567).

ನ.16ರಂದು ರದ್ದಾದ ರೈಲುಗಳು

ಶಿವಮೊಗ್ಗ – ತುಮಕೂರು (ರೈಲು ಸಂಖ್ಯೆ 16568), ತುಮಕೂರು – ಚಾಮರಾಜನಗರ (ರೈಲು ಸಂಖ್ಯೆ 07346), ಚಾಮರಾಜನಗರ – ಮೈಸೂರು (07328) ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಸೀನಿಯರ್‌ ಡಿವಿಷನಲ್‌ ಕಮರ್ಷಿಯಲ್‌ ಮ್ಯಾನೇಜರ್‌ ಜೆ.ಲೋಹಿತೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ಗುಡ್‌ ನ್ಯೂಸ್‌, ವಂದೇ ಭಾರತ್‌ ರೀತಿಯ ಮತ್ತೊಂದು ರೈಲು ರೆಡಿ, ಟಿಕೆಟ್‌ ದರ ಕಡಿಮೆ, ಹೇಗಿದೆ ಹೊಸ ರೈಲು?

Leave a Comment