ರೈಲ್ವೆ ವೇಳಾಪಟ್ಟಿ : ಬೆಂಗಳೂರಿನಿಂದ ಶಿವಮೊಗ್ಗದ ಮಧ್ಯೆ ಆರು ರೈಲುಗಳು (Trains) ಸಂಚರಿಸುತ್ತವೆ. ಈ ಪೈಕಿ ಎರಡು ರೈಲುಗಳು ಹೊರತು ಉಳಿದ ರೈಲುಗಳು ನಿತ್ಯ ಸಂಚರಿಸುತ್ತವೆ.
ಯಾವ್ಯಾವ ರೈಲಿನ ಟೈಮಿಂಗ್ ಏನು?
ರೈಲು 1 : ಯಶವಂತಪುರ – ಶಿವಮೊಗ್ಗ ಇಂಟರ್ ಸಿಟಿ (ರೈಲು ಸಂಖ್ಯೆ 16579)
![]() |
ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ರೈಲು ಹೊರಡಲಿದೆ. ಮಧ್ಯಾಹ್ನ 1.18ಕ್ಕೆ ಭದ್ರಾವತಿ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 2.15ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣ ತಲುಪಲಿದೆ.
ರೈಲು 2 : ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ (ರೈಲು ಸಂಖ್ಯೆ 20651)
ಮಧ್ಯಾಹ್ನ 3 ಗಂಟೆಗೆ ಮೆಜಸ್ಟಿಕ್ ರೈಲ್ವೆ (Trains) ನಿಲ್ದಾಣದಿಂದ ಹೊರಡಲಿದೆ. ಸಂಜೆ 6.59ಕ್ಕೆ ಭದ್ರಾವತಿ ನಿಲ್ದಾಣದ ತಲುಪಲಿದೆ. ರಾತ್ರಿ 7.40ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ. ರಾತ್ರಿ 9.18ಕ್ಕೆ ಸಾಗರ ನಿಲ್ದಾಣ, ರಾತ್ರಿ 9.45ಕ್ಕೆ ತಾಳಗುಪ್ಪ ತಲುಪಲಿದೆ.
ರೈಲು 3 : ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089)
ಸಂಜೆ 5.15ಕ್ಕೆ ಬೆಂಗಳೂರಿನ ಮೆಜಸ್ಟಿಕ್ ನಿಲ್ದಾಣದಿಂದ ಹೊರಡಲಿದೆ. ರಾತ್ರಿ 8.59ಕ್ಕೆ ಭದ್ರಾವತಿ ನಿಲ್ದಾಣ ತಲುಪಲಿದೆ. ರಾತ್ರಿ 9.40ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಲಿದೆ.
ರೈಲು 4 : ಮೈಸೂರು – ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227)
ರಾತ್ರಿ 11.15ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ಬೆಳಗ್ಗೆ 4.28ಕ್ಕೆ ಭದ್ರಾವತಿ ನಿಲ್ದಾಣ ತಲುಪಲಿದೆ. ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ, ಬೆಳಗ್ಗೆ 6.27ಕ್ಕೆ ಸಾಗರ, ಬೆಳಗ್ಗೆ 7.15ಕ್ಕೆ ತಾಳಗುಪ್ಪ ರೈಲ್ವೆ ನಿಲ್ದಾಣ ತಲುಪಲಿದೆ.

ರೈಲು 5 : ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16581)
ವಾರದಲ್ಲಿ ಮೂರು ದಿನ ಈ ರೈಲು ಸಂಚರಿಸಲಿದೆ. ಸೋಮವಾರ, ಬುಧವಾರ, ಶನಿವಾರ ಈ ರೈಲು ಸಂಚರಿಸಲಿದೆ. ಯಶವಂತಪುರದಿಂದ ರಾತ್ರಿ 11.50ಕ್ಕೆ ಹೊರಡಲಿದೆ. ಬೆಳಗ್ಗೆ 5.31ಕ್ಕೆ ಭದ್ರಾವತಿ, ಬೆಳಗ್ಗೆ 6 ಗಂಟೆಗೆ ಶಿವಮೊಗ್ಗ ನಿಲ್ದಣದ ತಲುಪಲಿದೆ.
ರೈಲು 6 : ಎಂಜಿಆರ್ ಚೆನ್ನೈ – ಬೆಂಗಳೂರು – ಶಿವಮೊಗ್ಗ (ರೈಲು ಸಂಖ್ಯೆ 12691)
ವಾರದಲ್ಲಿ ಒಂದು ದಿನ ಮಾತ್ರ ಈ ರೈಲು ಸಂಚರಿಸುತ್ತದೆ. ಭಾನುವಾರ ಬೆಂಗಳೂರಿನಿಂದ ಬೆಳಗ್ಗೆ 5.05ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಬೆಳಗ್ಗೆ 11.33ಕ್ಕೆ ಭದ್ರಾವತಿ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 12.20ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಶ್ರೀಕಾಂತ್ ಜನ್ಮದಿನಾಚರಣೆ, ಹೇಗಿತ್ತು ಸಂಭ್ರಮ? ಯಾರೆಲ್ಲ ಏನೆಲ್ಲ ಹೇಳಿದರು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200