ಶಿವಮೊಗ್ಗದ ಒಂದು ರೈಲಿನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ, ರೈಲ್ವೆ ಇಲಾಖೆ ಪ್ರಕಟಣೆ

ರೈಲ್ವೆ ಸುದ್ದಿ: ಕಾರ್ಯಾಚರಣೆಯ ಕಾರಣಗಳಿಂದಾಗಿ, ಕೆಲವು ರೈಲುಗಳ (trains) ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 24ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್ – ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ರಾತ್ರಿ 9:30ರ ಬದಲಿಗೆ ಇನ್ಮುಂದೆ 9:40ಕ್ಕೆ ಚಿಕ್ಕಮಗಳೂರ ನಿಲ್ದಾಣ ತಲುಪಲಿದೆ.

Train in Shivamogga Railway Station

Train in Shivamogga Railway Station

ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ದೈನಂದಿನ ಎಕ್ಸಪ್ರೆಸ್ ರೈಲು ಇನ್ನು ಮುಂದೆ ಚಿಕ್ಕಮಗಳೂರಿನಿಂದ ಬೆಳಿಗ್ಗೆ 8:15ರ ಬದಲಿಗೆ 8 ಗಂಟೆಗೆ ಹೊರಡಲಿದೆ. ಇದರೊಂದಿಗೆ ಮಧ್ಯಂತರ ನಿಲ್ದಾಣಗಳ ಸಮಯವನ್ನೂ ಪರಿಷ್ಕರಿಸಲಾಗಿದೆ. ಕಣಿವೆಹಳ್ಳಿಯಲ್ಲಿ 8:33/8:34ರ ಬದಲಿಗೆ 8:18/8:19, ಸಖರಾಯಪಟ್ಟಣದಲ್ಲಿ 8:46/8:47ರ ಬದಲಿಗೆ 8:31/8:32, ಬಿಸಲೇಹಳ್ಳಿಯಲ್ಲಿ 8:58/8:59ರ ಬದಲಿಗೆ 8:43/8:44 ಹಾಗೂ ಕಡೂರು ನಿಲ್ದಾಣಕ್ಕೆ 9:30/9:40ರ ಬದಲಿಗೆ 9:05/9:25ಕ್ಕೆ ರೈಲು ಆಗಮಿಸಿ, ನಿರ್ಗಮಿಸಲಿದೆ. ದೇವನೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರೈಲು ಸಂಖ್ಯೆ 16240 ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸಪ್ರೆಸ್ ರೈಲು ಚಿಕ್ಕಮಗಳೂರು ನಿಲ್ದಾಣಕ್ಕೆ ರಾತ್ರಿ 8:55ರ ಬದಲಿಗೆ 9:05ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

Leave a Comment