ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 OCTOBER 2023
ವಂದೇ ಭಾರತ್ (Vande Bharat) ರೈಲುಗಳಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ದುಬಾರಿ ಟಿಕೆಟ್ ದರದ ಹಿನ್ನೆಲೆ ಸಾಮಾನ್ಯರು ಈ ರೈಲಿನಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತದೆ ಎಂಬ ಅಪವಾದವು ಇದೆ. ಹಾಗಾಗಿ ರೈಲ್ವೆ ಇಲಾಖೆ, ವಂದೇ ಭಾರತ್ ಮಾದರಿ NON AC ಸ್ಲೀಪರ್ ರೈಲುಗಳನ್ನು ಆರಂಭಿಸಿಲು ನಿರ್ಧರಿಸಿದೆ.
ಎಸಿ ವಂದೇ ಭಾರತ್ ರೈಲುಗಳಲ್ಲಿನ ಕಂಫರ್ಟ್ ಮತ್ತು ವೇಗವನ್ನೇ NON AC ಸ್ಲೀಪರ್ ವಂದೇ ಭಾರತ್ ರೈಲು ಹೊಂದಿರಲಿದೆ. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಎರಡು NON AC ವಂದೇ ಭಾರತ್ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಕ್ಟೋಬರ್ ತಿಂಗಳ ಕೊನೆಗೆ ಈ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಕೋಚ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಬಿ.ಜಿ.ಮಲ್ಯಾ ತಿಳಿಸಿದ್ದಾರೆ ಎಂದು ಆನ್ ಮನೋರಮಾ ವರದಿ ಮಾಡಿದೆ.
ವಂದೇ ಭಾರತ್ ರೈಲುಗಳು ಕಂಫರ್ಟ್ ಪ್ರಯಾಣ ಮತ್ತು ವೇಗದ ಸಂಚಾರಕ್ಕೆ ಹೆಸರಾಗಿವೆ. ದೇಶಾದ್ಯಂತ ವಿವಿಧ ನಗರಗಳಿಗೆ ಈ ರೈಲುಗಳು ಸಂಪರ್ಕ ಕಲ್ಪಿಸುತ್ತಿವೆ. ಈಗ ಇದೇ ಮಾದರಿಯ NON AC ಸ್ಲೀಪರ್ ರೈಲುಗಳು ಆರಂಭಿಸಲಾಗುತ್ತಿದ್ದು, ರೈಲ್ವೆ ಇಲಾಖೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.
ಇದನ್ನೂ ಓದಿ – ವಿದ್ಯಾನಗರ ಮೇಲ್ಸೇತುವೆ ಕಾಮಗಾರಿ ಕೊನೆ ಹಂತಕ್ಕೆ, ಶಿವಮೊಗ್ಗ – ಚಿತ್ರದುರ್ಗ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422