ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SOCIAL MEDIA | ಡಬಲ್ ಮೀನಿಂಗ್ ರೀಲ್ಸ್ (reels), ಸಿನಿಮಾ ಹಾಡುಗಳ ಬಿಟ್ಗೆ ಡಾನ್ಸ್, ಮೈಮಾಟ ಪ್ರದರ್ಶನ.. ಇನ್ಸ್ಟಾಗ್ರಾಂ ಅಂದರೆ ಕೇವಲ ಟೈಮ್ ಪಾಸ್. ಇಲ್ಲಿ ಕಲಿಯೋಕೆ, ತಿಳಿಯೋಕೆ ಏನೂ ಸಿಗುವುದಿಲ್ಲ ಎಂಬ ನಂಬಿಕೆ ಇರುವವರು ಇದ್ದಾರೆ. ಆದರೆ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಬದುಕು ಬದಲಾಗುತ್ತದೆ. ವ್ಯಾಪಾರ, ವಹಿವಾಟು ವೃದ್ಧಿಯಾಗಲಿದೆ. ನಮ್ಮೂರಲ್ಲೇ, ನಮ್ಮ ನಡುವೆಯೇ ಇದಕ್ಕೆ ಉದಾಹರಣೆಗಳಿವೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಾಗರದ ಸದ್ಗುರು ಮೊಬೈಲ್ಸ್ ಶೋ ರೂಂ ಅತ್ಯಂತ ಜನಪ್ರಿಯ. ಇಲ್ಲಿ ಮೊಬೈಲ್ ಖರೀದಿಗೆ ಹೊರ ಜಿಲ್ಲೆ, ಹೊರ ರಾಜ್ಯದಿಂದಲು ಗ್ರಾಹಕರು ಬರುತ್ತಾರೆ. ಶೋ ರೂಂ ಮಾಲೀಕ ಪವನ್ ಪೂಜಾರಿ ಬಳಿ ಸಲಹೆ ಪಡೆದು ಮೊಬೈಲ್ ಖರೀದಿಸುತ್ತಾರೆ. ಅದೇ ಮೊಬೈಲ್ ತಮ್ಮೂರಲ್ಲೆ ಸಿಕ್ಕರೂ ಜನ ಸಾಗರದ ಸದ್ಗುರು ಮೊಬೈಲ್ಸ್ ಶೋ ರೂಂ ಅನ್ನೆ ಹುಡುಕಿ ಬರುವುದಕ್ಕೆ ಕಾರಣ ಇನ್ಸ್ಟಾಗ್ರಾಂ ಮತ್ತು ಪವನ್ ಪೂಜಾರಿಯ ವಿಶ್ವಾಸಾರ್ಹ ಮಾತು. ಉದಾಹರಣೆ 1
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮುಂಭಾಗ ಒಲಿವಾ ಫ್ಯಾಷನ್ ವರ್ಡ್ ಬಟ್ಟೆ ಅಂಗಡಿ, ಆರಂಭವಾದ ಕೆಲವೇ ತಿಂಗಳಲ್ಲಿ ಜನಪ್ರಿಯವಾಗಿದೆ. ಶಿವಮೊಗ್ಗ, ಭದ್ರಾವತಿ, ತರೀಕೆರೆ, ಚನ್ನಗಿರಿಯಿಂದೆಲ್ಲ ಗ್ರಾಹಕರು ಇಲ್ಲಿ ಬಂದು ಬಟ್ಟೆ ಖರೀದಿಸುತ್ತಾರೆ. ಮಾಲೀಕ ಅನಿಲ್ ಸಾಗರ್ ಪ್ರತಿದಿನ ತಮ್ಮ ಅಂಗಡಿಯಲ್ಲಿನ ಬಟ್ಟೆಯ ಗುಣಮಟ್ಟ, ಡಿಸೈನ್, ಕಂಫರ್ಟ್ ಕುರಿತು ಇನ್ಸ್ಟಾಗ್ರಾಂ ಮತ್ತು ವಾಟ್ಸಪ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದಾರೆ. ಇದು ಜನರಿಗೆ ಇಷ್ಟವಾಗುತ್ತಿದೆ. ಉದಾಹರಣೆ 2
ವ್ಯಾಪಾರ, ವಹಿವಾಟು ವೃದ್ಧಿ
ಸದ್ಗುರು ಮೊಬೈಲ್ಸ್ ಮತ್ತು ಒಲಿವಾ ಫ್ಯಾಷನ್ ವರ್ಡ್ನದ್ದು ಉದಾಹರಣೆಯಷ್ಟೆ. ಶಿವಮೊಗ್ಗ ಜಿಲ್ಲೆಯ ಹಲವು ವ್ಯಾಪಾರಿಗಳು ಗ್ರಾಹಕರಿಗೆ ತಮ್ಮ ಉತ್ಪನ್ನಗಳ ಕುರಿತು ಮಾಹಿತಿ ನೀಡಲು, ಹೊಸ ಪ್ರಾಡೆಕ್ಟ್ ಕುರಿತು ಅಪ್ಡೇಟ್ ನೀಡಲು, ಹೊಸ ಗ್ರಾಹಕರನ್ನು ಸೆಳೆಯಲು ಇನ್ಸ್ಟಾಗ್ರಾಂ ಮೊರೆ ಹೋಗಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್, ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮಳಿಗೆಗಳ ಬ್ರಾಂಡ್ ಬೆಳೆಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಉದ್ಯಮದ ಲಾಭವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್
ಲಾಭ ಮಾಡಿಕೊಳ್ಳುವುದು ಹೇಗೆ?
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸದ್ಗುರು ಮೊಬೈಲ್ಸ್ನ ಪವನ್ ಪೂಜಾರಿ, ನಮ್ಮದು ಸಾಗರ ಪಟ್ಟಣದಲ್ಲಿರುವ ಅಂಗಡಿ. ಆದ್ದರಿಂದ ಇಲ್ಲಿಯ ಗ್ರಾಹಕರೆ ಇರಬೇಕು. ಇನ್ಸ್ಟಾಗ್ರಾಂನಿಂದಾಗಿ ನಾನಾ ಕಡೆಯ ಗ್ರಾಹಕರು ಬರುತ್ತಿದ್ದಾರೆ. ದೂರದ ಗ್ರಾಹಕರಿಂದ ಹೆಚ್ಚು ಲಾಭ ನಿರೀಕ್ಷೆ ಮಾಡುವುದಿಲ್ಲ. ಹಾಗಾಗಿ ಗ್ರಾಹಕರಿಗೆ ಕಡಿಮೆ ದರಕ್ಕೆ ಮೊಬೈಲ್ ಸಿಗಲಿದೆ. ಇದರಿಂದ ನಮ್ಮ ಸೇಲ್ಸ್ ಹೆಚ್ಚಾಗಲಿದೆ. ಸ್ಲಾಬ್ ಕೂಡ ಏರಿಕೆಯಾಗಲಿದೆ ಅನ್ನುತ್ತಾರೆ. ಸದ್ಗುರು ಮೊಬಲ್ಸ್ ಇನ್ಸ್ಟಾಗ್ರಾಂಗೆ ⇒ ಇಲ್ಲಿ ಕ್ಲಿಕ್ ಮಾಡಿ ಒಂದು ಉದಾಹರಣೆ. ನೂರು ಮೊಬೈಲ್ ಮಾರಾಟ ಮಾಡಿದರೆ 5 ಪರ್ಸೆಂಟ್ ಕಮಿಷನ್ ಸಿಗಲಿದೆ ಅಂದುಕೊಳ್ಳೋಣ. ಸ್ಲಾಬ್ ಹೆಚ್ಚಳದಿಂದಾಗಿ ಸಾವಿರ ಮೊಬೈಲ್ ಸೇಲ್ಸ್ ಮಾಡಿದರೆ 10 ಪರ್ಸೆಂಟ್ ಕಮಿಷನ್ ದೊರೆಯಲಿದೆ. ಇದರಲ್ಲಿ ಉಳಿದ ಐದು ಪರ್ಸೆಂಟ್ ಅನ್ನು ಗ್ರಾಹಕರಿಗೇ ಕೊಡಬಹುದು. ಕಸ್ಟಮರ್ಗೆ ಹೆಚ್ಚು ಬೆನಿಫಿಟ್ ಸಿಗಲಿದೆ. ಮೊದಲು ಜನರಿಗೆ ಹೆಚ್ಚು ಗಿಫ್ಟ್ ಕೊಡುತ್ತಿದ್ದೆ. ಈಗ ಗೋ ಸಂರಕ್ಷಣೆ, ಶಾಲೆ ಮಕ್ಕಳಿಗೆ ಪುಸ್ತಕ ಕೊಡಿಸುವುದು ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗೆ ಹಣ ವಿನಿಯೋಗಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸುತ್ತಾರೆ.
ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
ವಿಶ್ವಾಸ ಗಿಟ್ಟಿಸಿಕೊಳ್ಳುವುದು ಸುಲಭವಲ್ಲ
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿದಾಕ್ಷಣ ಗ್ರಾಹಕರು ಹೆಚ್ಚಳವಾಗುವುದಿಲ್ಲ. ಜನರ ವಿಶ್ವಾಸ ಸಂಪಾದನೆ ಮಾಡಬೇಕು. ಆಗ ಗ್ರಾಹಕರ ಸಂಖ್ಯೆ ಹೆಚ್ಚಳವಾಗಲಿದೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಒಲಿವಾ ಫ್ಯಾಷನ್ ವರ್ಡ್ನ ಅನಿಲ್ ಸಾಗರ್, ನಮ್ಮದು ಹೊಸ ಅಂಗಡಿ. ಇನ್ಸ್ಟಾಗ್ರಾಂ ಆರಂಭಿಸಿದ ಬಳಿಕ ಜನರು ಅಂಗಡಿ ಕುರಿತು ಹೆಚ್ಚಾಗಿ ತಿಳಿಯಿತು. ನಮ್ಮ ಪ್ರಮೋಷನ್ ಗಮನಿಸಿ ಅಂಗಡಿಗೆ ಬಂದು ಬಟ್ಟೆಯ ಗುಣಮಟ್ಟ ಪರೀಶಿಲಿಸಿದರು. ಗುಣಮಟ್ಟದ ಬಟ್ಟೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ಈಗ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ವಿಡಿಯೋ ಮಾಡುವುದರ ಜೊತೆಗೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.
ಒಲಿವಾ ಫ್ಯಾಷನ್ ವರ್ಡ್ ಇನ್ಸ್ಟಾಗ್ರಾಂಗೆ ⇒ ಇಲ್ಲಿ ಕ್ಲಿಕ್ ಮಾಡಿ
ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಜಮಾನದ ಗ್ರಾಹಕರನ್ನು ತಲುಪುವುದು ಸುಲಭ. ವಿಶ್ವಾಸಾರ್ಹತೆ ಉಳಿಸಿಕೊಂಡರೆ ಲಾಂಗ್ ಟೈಮ್ ಕಸ್ಟಮರ್ಗಳನ್ನು ಸಂಪಾದಿಸಿಕೊಳ್ಳಬಹುದು. ಇದರಿಂದ ವ್ಯಾಪಾರ ವಹಿವಾಟಿಗು ಅನುಕೂಲವಾಗಲಿದೆ.