ಟೆಕ್ ನ್ಯೂಸ್: ನೀವು ಗೂಗಲ್ ಪ್ಲೇ ಸ್ಟೋರ್ನಿಂದ ವಾಟ್ಸಾಪ್ ಡೌನ್ಲೋಡ್ ಮಾಡುತ್ತಿದ್ದೀರಾ? ಹಾಗಿದ್ದರೆ ತಕ್ಷಣ ಹುಷಾರಾಗಿರಿ. ಅಸಲಿ ಆಪ್ ಅನ್ನೇ ಹೋಲುವ ನಕಲಿ ವಾಟ್ಸಾಪ್ ಒಂದು ಪ್ಲೇ ಸ್ಟೋರ್ನಲ್ಲಿ ಪ್ರತ್ಯಕ್ಷವಾಗಿದೆ. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಡೌನ್ಲೋಡ್ ಮಾಡಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಸ್ಪಾನ್ಸರ್ಡ್ ಜಾಹೀರಾತು ರೂಪದಲ್ಲಿ ಪ್ಲೇ ಸ್ಟೋರ್ನ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳುತ್ತಿರುವ ಈ ಆಪ್, ಅಸಲಿ ವಾಟ್ಸಾಪ್ನ ಲೋಗೋ ಹಾಗೂ ಸ್ಕ್ರೀನ್ಶಾಟ್ಗಳನ್ನೇ ಬಳಸಿ ವಂಚಿಸುತ್ತಿದೆ. ‘ಆಗ್ಮೆಂಟ್ ಅಸೆಟ್ಸ್ ಸಲ್ಲು’ ಎಂಬ ಡೆವಲಪರ್ ಹೆಸರಿನಲ್ಲಿರುವ ಈ ಅಪ್ಲಿಕೇಶನ್ ಅದನ್ನು ಡೌನ್ಲೋಡ್ ಮಾಡಿದವರ ಖಾಸಗಿ ಮಾಹಿತಿ ಮತ್ತು ಓಟಿಪಿಗಳನ್ನು ಕದಿಯುವ ಅಪಾಯವಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಆಪ್ ಡೌನ್ಲೋಡ್ ಮಾಡುವ ಮುನ್ನ ಡೆವಲಪರ್ ಹೆಸರು ‘WhatsApp LLC’ ಎಂದಿದೆಯೇ ಎಂಬುದನ್ನು ಪರಿಶೀಲಿಸಿ. ಅಕಸ್ಮಾತ್ ಈ ನಕಲಿ ಆಪ್ ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಿ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿ ಎಂದು ತಿಳಿಸಲಾಗಿದೆ.