NEWS HIGHLIGHTS
ಟೆಕ್ ನ್ಯೂಸ್: ವಾಟ್ಸಾಪ್ ತನ್ನ ಬಳಕೆದಾರರ ಗೌಪ್ಯತೆ ಮತ್ತಷ್ಟು ಬಲಪಡಿಸಲು ಹೊಸ ಪ್ರಯೋಗ ನಡೆಸುತ್ತಿದೆ. ಫೋಟೊ, ವಿಡಿಯೊ ಹಾಗೂ ವಾಯ್ಸ್ ನೋಟ್‌ಗಳಿಗೆ ಸೀಮಿತವಾಗಿದ್ದ VIEW ONCE (ಒಮ್ಮೆ ಮಾತ್ರ ವೀಕ್ಷಿಸುವ) ಸೌಲಭ್ಯ ಇನ್ಮುಂದೆ ಸಾಮಾನ್ಯ TEXT ಮೆಸೇಜ್‌ಗಳಿಗೂ ವಿಸ್ತರಿಸಲು ಮುಂದಾಗಿದೆ.
ಸದ್ಯ ಆಂಡ್ರಾಯ್ಡ್‌ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ. ಈ ಹೊಸ ಫೀಚರ್ ಅನ್ವಯ, ಮೆಸೇಜ್ ಕಳುಹಿಸುವವರು VIEW ONCE ಎಂದು ಮಾರ್ಕ್ ಮಾಡಿದರೆ, ಅದನ್ನು ಸ್ವೀಕರಿಸುವವರು ಕೇವಲ ಒಂದು ಬಾರಿ ಮಾತ್ರ ಓದಬಹುದಾಗಿದೆ. ಆ ಮೆಸೇಜ್ ಓದಿದ ಬಳಿಕ ತಕ್ಷಣ ಅದು ಕಣ್ಮರೆಯಾಗುತ್ತದೆ ಎಂದು ಡಬ್ಲು.ಎ.ಬೀಟಾ ಇನ್ಫೋ ವರದಿ ಮಾಡಿದೆ.

ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಈ ಮೆಸೇಜುಗಳ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಅಲ್ಲದೆ ಈ ಮೆಸೇಜುಗಳನ್ನು ಫಾರ್ವರ್ಡ್ ಮಾಡಲು ಸಾಧ್ಯವಿರುವುದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:➤ ಕೋರ್ಟ್ ಮೊರೆ ಹೋದ ಟೆಲಿಗ್ರಾಂ ಆ್ಯಪ್, ಕೇಂದ್ರ ಸರ್ಕಾರದ ಸಮರ್ಥನೆ ಏನು? ಟೆಲಿಗ್ರಾಂ ಸಂಸ್ಥೆ ಹೇಳಿದ್ದೇನು?