ಶಿವಮೊಗ್ಗ ಲೈವ್.ಕಾಂ | SHIMOGA NEWS | 14 MAY 2021
ಕರೋನ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಜನರು ಮನೆಯಿಂದ ಹೊರಬಾರದಂತೆ ನಿಯಂತ್ರಿಸಲಾಗಿದೆ. ಆದರೆ ಪೊಲೀಸರು ಮಾತ್ರ ಕರ್ತವ್ಯ ನಿರ್ವಹಿಸಲೇಬೇಕಾಗಿದೆ. ಡ್ಯೂಟಿ ಮಾಡುವ ಪೊಲೀಸರು ಸೋಂಕಿಗೆ ತುತ್ತಾಗುವ ಆತಂಕ ಹೆಚ್ಚಿರುವುದರಿಂದ ಶಿವಮೊಗ್ಗ ಪೊಲೀಸರಿಗೆ ಸ್ಟೀಮ್ ವ್ಯವಸ್ತೆ ಮಾಡಲಾಗಿದೆ.
ಜಿಲ್ಲಿ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಶಿವಮೊಗ್ಗ ಪೊಲೀಸರಿಗೆ ಸ್ಟೀಮ್ ವ್ಯವಸ್ಥೆ ಮಾಡಲಾಗಿದೆ. ಡ್ಯೂಟಿಗೆ ತೆರಳುವ ಮುನ್ನ ಮತ್ತು ಕರ್ತವ್ಯದ ಬಳಿಕ ಇಲ್ಲಿ ಸ್ಟೀಮ್ ಪಡೆಯಬಹುದಾಗಿದೆ. ಒಂದು ಸರ್ತಿ ನಾಲ್ಕು ಮಂದಿ ಸ್ಟೀಮ್ ತೆಗೆದುಕೊಳ್ಳಬಹುದಾಗಿದೆ.
ಹೇಗಿದೆ ಸ್ಟೀಮ್ ವ್ಯವಸ್ಥೆ?
ಪ್ರೆಷರ್ ಕುಕ್ಕರ್ನಿಂದ ಹೊರ ಬರುವ ಸ್ಟೀಮ್ಗೆ ಪೈಪ್ ಅಳವಡಿಸಲಾಗಿದೆ. ನಾಲ್ಕು ಮಂದಿ ಸ್ಟೀಮ್ ತೆಗೆದುಕೊಳ್ಳಲು ಇಲ್ಲಿ ಅವಕಾಶವಿದೆ. ಪ್ರತಿ ಗಂಟೆಗೊಮ್ಮೆ ಈ ಕುಕ್ಕರ್ಗೆ ಎರಡು ಕಾರ್ನಿವಲ್ ಎಂಬ ಎರಡು ಕ್ಯಾಫ್ಸೂಲ್ ಹಾಕಲಾಗುತ್ತದೆ.
‘ಕರ್ತವ್ಯಕ್ಕೆ ಹೋಗುವ ಮುನ್ನ ಮತ್ತು ಕರ್ತವ್ಯದಿಂದ ಹಿಂತಿರುಗಿದ ಬಳಿಕ ಎಲ್ಲರೂ ಸ್ಟೀಮ್ ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರಿಗೂ ಮೂರರಿಂದ ನಾಲ್ಕು ನಿಮಿಷದ ಅವಕಾಶವಿರುತ್ತದೆ. ಎಲ್ಲರಿಂದಲೂ ಪಾಸಿಟಿವ್ ಒಪಿನಿಯನ್ ಇದೆ. ಉಸಿರಾಟದಲ್ಲಿ ರಿಲೀಫ್ ಕಾಣುತ್ತಿದೆ’ ಅನ್ನುತ್ತಾರೆ ಡಿಎಆರ್ ಎಎಸ್ಐ ಕೃಷ್ಣಮೂರ್ತಿ.
ಇಮ್ಯುನಿಟಿ ಹೆಚ್ಚಲಿ
ಈ ಪ್ರಕ್ರಿಯೆಯಿಂದ ಕರೋನವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಅಂತೇನಲ್ಲ. ಆದರೆ ಉಸಿರಾಟದ ಸಮಸ್ಯೆ ಆಗದಿರಲಿ ಎಂಬ ಕಾರಣಕ್ಕೆ ಸ್ಟೀಮ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ. ಪಾಸಿಟಿವ್ ರೆಸ್ಪಾನ್ಸ್ ಕೂಡು ಸಿಗುತ್ತಿದೆ ಅನ್ನುತ್ತಾರೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್.
ಶಿವಮೊಗ್ಗ ಪೊಲೀಸರ ಕಾರ್ಯ ಅನುಕರಣೀಯವಾಗಿದೆ. ಕೋವಿಡ್ ಡ್ಯೂಟಿಯಲ್ಲಿರುವ ಇತರೆ ಇಲಾಖೆ ಸಿಬ್ಬಂದಿಗಳಿಗೂ ಇಂತಹ ವ್ಯವಸ್ಥೆಯ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ ಯೋಚಿಸಬೇಕಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]