ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 9 MAY 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರಾಜ್ಯಾದ್ಯಂತ 14 ದಿನ ಲಾಕ್ ಡೌನ್ ಘೋಷಣೆಯಾಗಿದೆ. ಶಿವಮೊಗ್ಗದಲ್ಲಿ ಬಿಗಿಯಾದ ಲಾಕ್ಡೌನ್ ಕೈಗೊಳ್ಳಲು ನಿರ್ಧರಿಸಲಾಗಿದೆ. ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸ್ವಾತಂತ್ರ್ಯ ನೀಡಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವರ ಸೂಚನೆ ಏನು?
ಲಾಕ್ಡೌನ್ ಪರಿಣಾಮಕಾರಿ ಆಗಬೇಕಿದ್ದರೆ ಪೊಲೀಸ್ ಇಲಾಖೆಯದ್ದು ಪ್ರಮುಖ ಜವಾಬ್ದಾರಿ
ವಾರ್ಡ್ವಾರು ನಾಖಾಬಂಧಿ ಹಾಕಬೇಕು. ವಾರ್ಡ್ನ ವ್ಯಾಪ್ತಿಯಲ್ಲೇ ಓಡಾಡಬೇಕು. ಮೆಡಿಕಲ್ ಶಾಪ್ಗೆ ಹೋಗಬೇಕಾದರೂ ನಡೆದುಕೊಂಡೆ ಹೋಗಬೇಕು.
ಒಂದೇ ಒಂದು ವಾಹನ ಓಡಾಡಿದರೆ ಆ ಭಾಗದಲ್ಲಿ ಡ್ಯೂಟಿಯಲ್ಲಿ ಇರುವ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ.
ಎಲ್ಲಾ ದಿನಸಿ ಅಂಗಡಿ ಮುಂದೆ ಡಿಸ್ಟೆನ್ಸ್ ಮೇಂಟೇನ್ ಮಾರ್ಕ್ ಮಾಡಬೇಕು. ಕೋವಿಡ್ ನಿಯಮ ಉಲ್ಲಂಘಿಸಿದರೆ ಅಂಗಡಿ ಬಾಗಿಲು ಹಾಕಿಸಿ, ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಪೊಲೀಸರಿಗೆ ಪೂರ್ಣ ಜವಾಬ್ದಾರಿ ನೀಡಲಾಗುತ್ತದೆ. ಒಂದು ವೇಳೆ ಜನರ ನಿಯಂತ್ರಣ ಆಗದಿದ್ದರೆ ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚಿಸಲಾಗುತ್ತದೆ.
ನೆಹರೂ ಸ್ಟೇಡಿಯಂ, ಪಾರ್ಕುಗಳಲ್ಲಿ ವಾಕಿಂಗ್ ಮಾಡಲು ಕೂಡ ಅವಕಾಶ ಇರುವುದಿಲ್ಲ.
ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?