ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 JANUARY 2023
ಹೊಸನಗರ : ಚಲಿಸುತ್ತಿದ್ದ ಬಸ್ಸಿನಿಂದ (moving bus) ಕೆಳಗೆ ಬಿದ್ದು ಪಿಯುಸಿ ವಿದ್ಯಾರ್ಥಿಯೊಬ್ಬಳು ಗಾಯಗೊಂಡಿದ್ದಾಳೆ. ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಗಾಣಿಗ ಗ್ರಾಮದಿಂದ ಹೊಸನಗರದಲ್ಲಿರುವ ಕಾಲೇಜಿಗೆ ಖಾಸಗಿ ಬಸ್ಸಿನಲ್ಲಿ (moving bus) ತೆರಳುವಾಗ ಬಟ್ಟೆಮಲ್ಲಪ್ಪ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬಸ್ಸಿನ ಡೋರ್ ಹಾಕದಿರುವುದು ಮತ್ತು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಪಿಯುಸಿ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಕೆಯ ತಲೆ, ಮುಖ, ಮೈ, ಕೈಗೆ ಗಾಯವಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಕೂಡಲೆ ಇತರೆ ಪ್ರಯಾಣಿಕರು ಆಕೆಯನ್ನು ಹೊಸನಗರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಸನಗರ ಠಾಣೆಯಲ್ಲಿ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಬಜರಂಗದಳ ಸಂಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಯತ್ನ, ನಾಳೆ ಸಾಗರ ಬಂದ್, ಈವರೆಗೂ ಏನಾಯ್ತು? ಇಲ್ಲಿದೆ ಡಿಟೇಲ್ಸ್
(ವಿದ್ಯಾರ್ಥಿನಿ ಹೆಸರು ಪ್ರಕಟಿಸದಂತೆ ಮನವಿ ಮಾಡಲಾಗಿದೆ)
ಶಿವಮೊಗ್ಗ ಲೈವ್.ಕಾಂ