ಹೊಳೆಹೊನ್ನೂರು ಪೊಲೀಸರ ಮಿಂಚಿನ ಕಾರ್ಯಾಚರಣೆ, 85 ಸಾವಿರ ಹಣ ದೋಚಿದ್ದವರು ಎರಡೇ ದಿನದಲ್ಲಿ ಅರೆಸ್ಟ್
ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು | 11 ಜುಲೈ 2019 ಬಾರ್ ಕ್ಯಾಶಿಯರ್’ನನ್ನು ಅಡ್ಡಗಟ್ಟಿ ಹಣ ದೋಚಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಪೈಕಿ ಅದೇ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನು ಸೇರಿದ್ದಾನೆ. ಜಂಬರಘಟ್ಟ ಗ್ರಾಮದ ಬಸವರಾಜ್ (38), ಶ್ರೀನಿವಾಸ್ ಅಲಿಯಾಸ್ ಗೋವಾ (24), ನವೀನ್ (23), ಅವಿನಾಶ್ (24) ಬಂಧಿತರು. ಬಾರ್ ಕ್ಯಾಶಿಯರ್ ವೆಂಕಟೇಶ್, ಸೋಮವಾರ ರಾತ್ರಿ 85 ಸಾವಿರ ಹಣ ತೆಗೆದುಕೊಂಡು ಜಂಬರಘಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ವೆಂಕಟೇಶ್ ಅವರನ್ನು ಅಡ್ಡಗಟ್ಟಿದ ಮುಸುಕುಧಾರಿಗಳು, … Read more