ಭದ್ರಾವತಿಯಲ್ಲಿ ಬಿಸಿ ಊಟದ ಸಿಬ್ಬಂದಿ ಶಾಲೆಗೆ ಬಂದಾಗ ಕಾದಿತ್ತು ಆಘಾತ
ಭದ್ರಾವತಿ: ಸರ್ಕಾರಿ ಶಾಲೆಯ ಕೊಠಡಿಯ ಬೀಗ ಮುರಿದು 32 ಇಂಚಿನ ಸ್ಯಾಮ್‌ಸಂಗ್ ಟಿವಿ ಕಳ್ಳತನ ಮಾಡಲಾಗಿದೆ. ಭದ್ರಾವತಿಯ ಭದ್ರಾ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಊಟದ ಹಾಲ್‌ನ ಬೀಗ ಮುರಿದ ಕಳ್ಳರು ಒಳಗಿದ್ದ ಟಿವಿಯನ್ನು ಕದ್ದೊಯ್ದಿದ್ದಾರೆ. ಅಡುಗೆ ಸಹಾಯಕಿ ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಶಿಕ್ಷಕಿ ಉಮಾ ಅವರು ದೂರು ನೀಡಿದ್ದಾರೆ. ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಶಿವಮೊಗ್ಗದ ಫೋಟೊಗ್ರಾಫರ್ … Read more