ಶಿವಮೊಗ್ಗಕ್ಕೆ ಸ್ವಚ್ಛ ಭಾರತ ಪ್ರಶಸ್ತಿ, ಮೇಯರ್’ಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

Swachh-Bharat-Award-For-Shimoga-city

SHIMOGA | ಸ್ವಚ್ಛ ಭಾರತ (Swachh Bharat) ಯೋಜನೆ ಅಡಿ ಶಿವಮೊಗ್ಗ ನಗರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಯರ್ ಸುನೀತಾ ಅಣ್ಣಪ್ಪ ಅವರಿಗೆ ಪ್ರಶಸ್ತಿ ನೀಡಿದರು. ನವದೆಹಲಿಯ ತಲ್ಕಾಟೋರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛ ಸರ್ವೇಕ್ಷಣ (Swachh Bharat) ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿವಮೊಗ ನಗರಕ್ಕೆ ಪ್ರಶಸ್ತಿ ನೀಡಲಾಯಿತು. ಶಿವಮೊಗ್ಗಕ್ಕೆ Fastest Mover City ಪ್ರಶಸ್ತಿ ಲಭಿಸಿದೆ. ಮೇಯರ್ ಸುನೀತಾ ಅಣ್ಣಪ್ಪ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. … Read more

ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಗುಂಡಿಗಳ ಜೊತೆಗೆ ಈಗ ಜೆಲ್ಲಿ ಕಾಟ, ಕಾರು ಅಪಘಾತ

small-stones-on-Shimoga-Bhadravathi-Highway

SHIMOGA | ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲಿ ಗುಂಡಿಗಳ ಕಾಟದಿಂದ ಹೈರಾಣಾಗಿದ್ದ ವಾಹನ ಸವಾರರಿಗೆ ಈಗ ಜೆಲ್ಲಿ ಕಲ್ಲುಗಳಿಂದ (SMALL STONE) ಸಂಕಷ್ಟ ಶುರುವಾಗಿದೆ. ರಸ್ತೆ ತುಂಬೆಲ್ಲ ಜೆಲ್ಲೆ ಹರಡಿಕೊಂಡಿದ್ದು, ಚಾಲಕ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದಿದೆ. ನಿದಿಗೆ ಕೆರೆ ಸಮೀಪ ತಿರುವಿನಲ್ಲಿ ಇವತ್ತು ಕಾರು ಪಲ್ಟಿ ಹೊಡೆದಿದೆ. ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ‘ಶಿವಮೊಗ್ಗ – ಭದ್ರಾವತಿ ಹೆದ್ದಾರಿ ಪರಿಸ್ಥಿತಿ 40 ಪರ್ಸೆಂಟ್ ಕಮಿಷನ್ ವ್ಯವಹಾರಕ್ಕೆ … Read more

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ದಿನ ಮಾಂಸ ಮಾರಾಟ ನಿಷೇಧ

Palike-with-Commissioner-photo8578/6

SHIMOGA | ಗಾಂಧಿ ಜಯಂತಿ (GANDHI JAYANTHI) ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಮಹಾನಗರ ಪಾಲಿಕೆ ಆಯುಕ್ತರು, ಅ.2ರಂದು ಗಾಂಧಿ ಜಯಂತಿ (GANDHI JAYANTHI) ಅಂಗವಾಗಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದಾರೆ. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿದರೆ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ … Read more

ಶಿವಮೊಗ್ಗದ 6 ರೈಲುಗಳ ಸಮಯ ಬದಲಾವಣೆ, ಯಾವ್ಯಾವ ರೈಲು? ಯಾವ ನಿಲ್ದಾಣದಲ್ಲಿ ಸಮಯ ಬದಲು?

Shimoga-Train-Coach-and-Engine

SHIMOGA | ನೈಋತ್ಯ ರೈಲ್ವೆ ಇಲಾಖೆಯು ಕೆಲವು ರೈಲುಗಳ ಸಮಯ ಬದಲಾವಣೆ (TIME CHANGE) ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ನಿಲ್ದಾಣಗಳಿಗೆ ತಲುಪುವ ಮತ್ತು ಹೊರಡು ಸಮಯ ಬದಲಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ 6 ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದೆ. ಅಕ್ಟೋಬರ್ 1 ರಿಂದಲೇ ಹೊಸ ಸಮಯ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವ್ಯಾವ ರೈಲುಗಳ ಸಮಯ ಬದಲಾಗಿದೆ? (TIME CHANGE) ನಿಲ್ದಾಣ ಹಿಂದಿನ ಸಮಯ ಹೊಸ ಸಮಯ ಆನಂದಪುರ ರಾತ್ರಿ 8.58 – 9 ಗಂಟೆ ರಾತ್ರಿ … Read more

ಮಾಚೇನಹಳ್ಳಿಯ ಗಾರ್ಮೆಂಟ್ಸ್ ಕಾರ್ಮಿಕ ಸಾವು, ಮೈಮೇಲಿದೆಯಂತೆ ಗಾಯದ ಗುರುತು

crime name image

SHIMOGA | ಗಾರ್ಮೆಂಟ್ಸ್ (GARMENTS) ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಆತನ ಮೈಮೇಲೆ ಗಾಯದ ಗುರುತುಗಳಿವೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಮಾಚೇನಹಳ್ಳಿಯ ಗಾರ್ಮೆಂಟ್ಸ್ ನಲ್ಲಿ (GARMENTS) ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಲಿಲಾಧರ್ ಮೃತ ದುರ್ದೈವಿ. ಸೆ.28ರಂದು ಲಿಲಾಧರ್ ತನ್ನ ಕೊಠಡಿಯಲ್ಲಿ ಮೃತಪಟ್ಟಿದ್ದಾನೆ. ಆತನ ಮೈಮೇಲೆ ಗಾಯದ ಗುರುತುಗಳಿವೆ. ಹಾಗಾಗಿ ಸಾವಿನ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಕಾಡಿನಲ್ಲಿ ಅಸ್ಥಿಪಂಜರ ಪತ್ತೆ, ಪಕ್ಕದಲ್ಲಿತ್ತು ಸೀರೆ, … Read more

ಕಾಡಿನಲ್ಲಿ ಅಸ್ಥಿಪಂಜರ ಪತ್ತೆ, ಪಕ್ಕದಲ್ಲಿತ್ತು ಸೀರೆ, ಸರ

HOSANAGARA-TALUK-NEWS-1.jpg

RIPPONPETE | ಕಾಡಿನಲ್ಲಿ ಅಸ್ಥಿಪಂಜರ (skeleton) ಪತ್ತೆಯಾಗಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು. ಅದರ ಪಕ್ಕದಲ್ಲಿ ಸೀರೆ ಮತ್ತು ಕೊರಳಿನ ಸರ ಪತ್ತೆಯಾಗಿದೆ. ಹಾರಂಬಳ್ಳಿ ಕಾಡಿನಲ್ಲಿ ಅಸ್ಥಿಪಂಜರ (skeleton) ಪತ್ತೆಯಾಗಿದೆ. ಸೀರೆ ಮತ್ತು ಕೊರಳಿನ ಸರ ಇರುವುದರಿಂದ ಇದು ಮಹಿಳೆಯ ಅಸ್ಥಿಪಂಜರ ಇರಬೇಕು ಎಂದು ಶಂಕಿಸಲಾಗಿದೆ. ಕಳೆದ ವರ್ಷ ಹಾರಂಬಳ್ಳಿ ಗ್ರಾಮದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ವೃದ್ಧೆಯ ಕುಟುಂಬದವರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಕಾಣೆಯಾಗಿದ್ದ ವೃದ್ಧೆಯದ್ದೆ ಸರ ಮತ್ತು ಸೀರೆ ಇರಬಹುದು … Read more

ಪಾಲಿಕೆಯಲ್ಲಿ ನಡೆಯುತ್ತಿರುವ ಕೋಟಿ ಕೋಟಿಯ ಕಾಮಗಾರಿ ಬಗ್ಗೆ ಪಾಲಿಕಗೇ ಗೊತ್ತಿಲ್ಲವಂತೆ..!

Shimoga-Palike-Premises-Road-Work-controversy

SHIMOGA | ಶಿವಮೊಗ್ಗ ಮಹಾನಗರ ಪಾಲಿಕೆಗೆ ಗೊತ್ತಿಲ್ಲದೆ ಪಾಲಿಕೆ ಆವರಣದಲ್ಲಿ ಕೋಟಿ ಕೋಟಿಯ (CRORE RUPEES) ಕಾಮಗಾರಿ ನಡೆಯುತ್ತಿದೆ. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಕೇಳಿದಾಗ. ತನಗೇನು ಗೊತ್ತಿಲ್ಲ ಎಂದು ಪಾಲಿಕೆ ಆಡಳಿತ ನುಣುಚಿಕೊಂಡಿದೆ. ಈ ನಡುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಪಾಲಿಕೆ ಆವರಣದಲ್ಲಿ 4.60 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ … Read more

ಸೊರಬದ ತಿಮ್ಮಪ್ಪನಿಗೆ 20 ವರ್ಷ ಜೈಲು, 1.44 ಲಕ್ಷ ದಂಡ, ಈತನ ಅಪರಾಧವೇನು?

Soraba-Thimmappa-sentenced-for-20-years-jail.j

SHIMOGA | ಬಾಲಕರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೊಡ್ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ, ಆಪರಾಧಿಗೆ 20 ವರ್ಷ (20 years jail) ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಸೊರಬ ತಾಲೂಕಿನ ತಿಮ್ಮಪ್ಪ (42) ಎಂಬಾತನಿಗೆ ಶಿಕ್ಷೆ ಆಗಿದೆ. ಅಪರಾಧ ಸಾಬೀತಾದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಇವತ್ತು ಶಿಕ್ಷೆ ಪ್ರಕಟಿಸಿದೆ. ಏನಿದು ಪ್ರಕರಣ? (20 years jail) ಬಾಲಕರ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿರುವ ಕುರಿತು ಸೈಬರ್ … Read more

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 2 ದಿನ ಖಾದಿ ಮಳಿಗೆ, ರಿಯಾಯಿತಿ ದರದಲ್ಲಿ ಮಾರಾಟ

shimoga dc office

SHIMOGA | ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಖಾದಿ (KHADI) ಮಳಿಗೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 02 ಮತ್ತು 03 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳಿಗೆ ಇರಲಿದೆ. ದುರ್ಗಿಗುಡಿಯ ಶ್ರೀ ಭಾರತಾಂಬೆ ಮಹಿಳಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘದ ಒಂದು ಮಳಿಗೆಯನ್ನು ತೆರೆಯಲಾಗುತ್ತದೆ ಎಂದು ತಿಳಿಸಿದರು. ಈ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಖಾದಿ (KHADI) ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಸಾರ್ವಜನಿಕರು ಈ … Read more

ಹೆಡೆ ಎತ್ತಿದ್ದ ನಾಗರ ಹಾವಿಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ಉರಗ ರಕ್ಷಕ

Nagarahavu-bites-snake-catcher-in-Bhadravathi

BHADRAVATHI | ನಾಗರ ಹಾವಿಗೆ ಮುತ್ತು ಕೊಡಲು ಹೋಗಿ ವ್ಯಕ್ತಿಯೊಬ್ಬರು ಅದರಿಂದ ಕಚ್ಚಿಸಿಕೊಂಡಿದ್ದಾರೆ (SNAKE BITE). ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಆತ ಪ್ರಣಪಾಯದಿಂದ ಪಾರಾಗಿದ್ದಾರೆ. ಭದ್ರಾವತಿಯ ಅಲೆಕ್ಸ್ ಎಂಬುವವರ ತುಟಿಗೆ ನಾಗರ ಹಾವು ಕಚ್ಚಿದೆ. ಬೊಮ್ಮನಕಟ್ಟೆಯ ಮದುವೆ ಮನೆಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು. ಸ್ಥಳೀಯರು ಅಲೆಕ್ಸ್ ಮತ್ತು ರೋನಿ ಎಂಬುವವರನ್ನು ಕರೆಯಿಸಿ ಹಾವು ಹಿಡಿಸಿದ್ದಾರೆ. ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡರು (SNAKE BITE) ಅಲೆಕ್ಸ್ ಮತ್ತು ರೋನಿ ಅವರು ಹಾವುಗಳನ್ನು … Read more