ಕಾರು, ಬೈಕ್‌ ಡಿಕ್ಕಿ, ಆಗುಂಬೆ ಗೇಟ್‌ ವಾಚರ್‌ ನಿಧನ

Agumbe-Forest-Gate-guard-succumbed-to-an-accident.webp

SHIVAMOGGA LIVE NEWS | 13 NOVEMBER 2023 THIRTHAHALLI : ಕಾರು ಮತ್ತು ಬುಲೆಟ್‌ ಬೈಕ್‌ ಡಿಕ್ಕಿಯಾಗಿ ಆಗುಂಬೆ ಫಾರೆಸ್ಟ್‌ ಗೇಟ್‌ ವಾಚರ್‌ ರಮೇಶ್‌ (55) ಮೃತಪಟ್ಟಿದ್ದಾರೆ. ತೀರ್ಥಹಳ್ಳಿ – ಆಗುಂಬೆ ಮಾರ್ಗದ ಬಾಳೆಬೈಲು ಸಮೀಪ ಘಟನೆ ಸಂಭವಿಸಿದೆ. ಸ್ವಿಫ್ಟ್‌ ಕಾರು ಮತ್ತು ರಮೇಶ್‌ ಅವರು ಚಲಿಸುತ್ತಿದ್ದ ಬುಲೆಟ್‌ ಬೈಕ್‌ ಅಪಘಾತಕ್ಕೀಡಾಗಿವೆ. ಗಂಭೀರ ಗಾಯಗೊಂಡಿದ್ದ ರಮೇಶ್‌ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ … Read more

ಶಿವಮೊಗ್ಗ ನಗರದಲ್ಲಿ ಅಂಟಿಗೆ ಪಂಟಿಗೆ, ರಾತ್ರಿ ಪೂರ್ತಿ ಮನೆ ಮನೆಗೆ ತೆರಳಿ ಶುಭ ಹಾರೈಕೆ

Antige-Pantige-in-Shimoga-city.webp

SHIVAMOGGA LIVE NEWS | 13 NOVEMBER 2023 SHIMOGA : ದೀಪಾವಳಿ ಸಂದರ್ಭ ಮಲೆನಾಡಿನಲ್ಲಿ ಅಂಟಿಗೆ ಪಂಟಿಗೆ (Antige Pantige) ಜ್ಯೋತಿ ಕೊಂಡೊಯ್ಯುವ ಸಂಪ್ರದಾಯ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಶಿವಮೊಗ್ಗ ನಗರದ ವಿವಿಧ ಬಡಾವಣೆಯ ಮನೆಗಳಿಗೆ ಅಂಟಿಗೆ ಪಂಟಿಗೆ ಜ್ಯೋತಿ ಕೊಂಡೊಯ್ಯಲಾಯಿತು. ಈ ಮೂಲಕ ನಗರದ ಪ್ರದೇಶದ ಜನರಿಗು ಅಂಟಿಗೆ ಪಂಟಿಗೆ ಪರಿಚಯಿಸುವ ಪ್ರಯತ್ನವಾಯಿತು. ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಅಂಟಿಗೆ ಪಂಟಿಗೆ (Antige Pantige) ತಂಡಗಳಿಗೆ ಚಾಲನೆ … Read more

ಜೈಲ್‌ ರಸ್ತೆ ಕರ್ಮಕಾಂಡ, 6 ತಿಂಗಳಿಗು ಹೆಚ್ಚು ಕಾಲ ನಡೆಯಿತು ಕಾಮಗಾರಿ, ಕೆಲವೇ ತಿಂಗಳಲ್ಲಿ ಬಿತ್ತು ಗುಂಡಿ

Pot-holes-in-Shimoga-smart-city-jail-road-work.webp

SHIVAMOGGA LIVE NEWS | 13 NOVEMBER 2023 SHIMOGA : ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿದೆ ಜೈಲ್‌ ರಸ್ತೆಯಲ್ಲಿ ನಡೆದ ಸ್ಮಾರ್ಟ್‌ ಸಿಟಿ (Smart city) ಕಾಮಗಾರಿ. ಆರು ತಿಂಗಳಿಗು ಹೆಚ್ಚು ಕಾಲ ರಸ್ತೆ ಪುನರ್‌ ನಿರ್ಮಾಣ ಮಾಡಲಾಗಿತ್ತು. ಆದರೆ ವರ್ಷ ಕಳೆಯುವುದರಲ್ಲಿ ರಸ್ತೆ ಗುಂಡಿಮಯವಾಗಿದೆ. ಸ್ಮಾರ್ಟ್‌ ಸಿಟಿ ಕೇಬಲ್‌ ಡೆಕ್‌ನ ಸ್ಲ್ಯಾಬ್‌ಗಳು ವಾಹನ ಸವಾರರ ಪಾಲಿಗೆ ಯಮ ಸ್ವರೂಪಿಯಾಗಿ ಕಾಡುತ್ತಿವೆ. ಅರ್ಧ ವರ್ಷದ ಕಾಮಗಾರಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಿವಮೊಗ್ಗದ ಜೈಲ್‌ ರಸ್ತೆಯನ್ನು ಪುನರ್‌ … Read more

ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಪೊಲೀಸರ ದಿಢೀರ್‌ ದಾಳಿ, ತಹಶೀಲ್ದಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ

Thahasildhar-Raid-at-Gandhi-Bazaar-in-Shimoga-illegal-cracker-sale.webp

SHIVAMOGGA LIVE NEWS | 13 NOVEMBER 2023 SHIMOGA : ಅಕ್ರಮವಾಗಿ ಪಟಾಕಿ (Crackers) ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆ ಗಾಂಧಿ ಬಜಾರ್‌ನಲ್ಲಿ ಅಂಗಡಿಯೊಂದರ ಮೇಲೆ ದಾಳಿ ನಡೆಸಲಾಗಿದೆ. ಸಾವಿರಾರು ರೂ. ಮೌಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ. ತಹಶೀಲ್ದಾರ್‌ ನಾಗರಾಜ್‌ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಾಂಧಿ ಬಜಾರ್‌ನ ಅಂಗಡಿಯೊಂದರಲ್ಲಿ ಅಕ್ರಮವಾಗಿ ಪಟಾಕಿ (Crackers) ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆ ದಾಳಿ ಮಾಡಲಾಯಿತು. ಅಂಗಡಿಯಲ್ಲಿ ಸಾವಿರಾರು ರೂ. ಮೌಲ್ಯದ ಪಟಾಕಿ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ. ಇದನ್ನೂ … Read more