ಧಗಧಗ ಹೊತ್ತಿ ಉರಿದ ಐರಾವತ, ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ

airavata-bus-incident-in-tarikere.

SHIVAMOGGA LIVE NEWS | 14 MAY 2024 TARIKERE : ಚಲಿಸುತ್ತಿದ್ದ ಐರಾವತ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಸೆಮಿ ಸ್ಲೀಪರ್‌ ಬಸ್ಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿದೆ. ಬಸ್ಸು ಭಾಗಶಃ ಸುಟ್ಟು ಹೋಗಿದೆ. ತರೀಕೆರೆ ತಾಲೂಕು ಅಜ್ಜಂಪುರ ಕ್ರಾಸ್‌ ಬಳಿ ರಾತ್ರಿ 1.30ರ ಹೊತ್ತಿಗೆ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬೆಂಕಿ … Read more

ಸಿಗಂದೂರು ಧರ್ಮದರ್ಶಿ ಹುಟ್ಟುಹಬ್ಬ, ವಿವಿಧೆಡೆ ವಿಶೇಷ ಪೂಜೆ, ಹಣ್ಣು ವಿತರಣೆ, ಎಲ್ಲೆಲ್ಲಿ ಹೇಗಿತ್ತು ಆಚರಣೆ?

Sigandur-Dharmadarshi-Dr-Ramappa-birthday-in-temple

SHIVAMOGGA LIVE NEWS | 14 MAY 2024 BYKODU : ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಅವರ 71ನೇ ಹುಟ್ಟುಹಬ್ಬವನ್ನು ಭಕ್ತರು ಸಂಭ್ರಮದಿಂದ ಆಚರಿಸಿದರು. ವಿಶೇಷ ಪೂಜೆ, ರಕ್ತದಾನ, ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಎಲ್ಲೆಲ್ಲಿ ಹೇಗೆ ಆಚರಣೆ? ಭಕ್ತಾದಿಗಳು ಸಿಗಂದೂರು ದೇವಸ್ಥಾನ ಆವರಣದಲ್ಲಿ ಕೇಕ್ ಕತ್ತರಿಸಿ, ಸಂಭ್ರಮಾಚರಣೆ ಮಾಡಿದರು. ರೋಟರಿ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ಸೇರಿದಂತೆ … Read more

ಡೊನೇಷನ್‌ ಹಾವಳಿ, ದೆಹಲಿ ಮಾದರಿ ಅನುಸರಿಸುವಂತೆ ಆಗ್ರಹ

AAP-urges-to-stop-donation-menace-in-Shimoga

SHIVAMOGGA LIVE NEWS | 14 MAY 2024 SHIMOGA : ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ನೆಪದಲ್ಲಿ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್‌ ಅಹಮ್ಮದ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಜೀರ್‌ ಅಹಮ್ಮದ್‌, ಜೂನ್ ತಿಂಗಳು ಸಮೀಪಿಸುತ್ತಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್‌ ಹಾವಳಿ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಶೇ.15ರಷ್ಟು ಶುಲ್ಕ ಹೆಚ್ಚಿಸುತ್ತಾರೆ. ಸರ್ಕಾರ ಕೂಡ ಇದಕ್ಕೆ ಅನುಮೋದನೆ ನೀಡುತ್ತಿದೆ. ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರವಿದ್ದರೂ … Read more

ಬಡ್ಡಿ ದಂಧೆಗೆ ಶಿವಮೊಗ್ಗದಲ್ಲಿ ಮಹಿಳೆ ಬಲಿ, ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ

Police-Jeep-in-Shimoga-city

SHIVAMOGGA LIVE NEWS | 14 MAY 2024 SHIMOGA : ಬಡ್ಡಿಗೆ ಸಾಲ ನೀಡಿದ್ದವರು ಮನೆ ಬಳಿ ಬಂದು ಗಲಾಟೆ ಮಾಡಿದ್ದರಿಂದ ಮನನೊಂದು ಮಹಿಳೆಯೊಬ್ಬರು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ತಾಲೂಕು ಗೋಂದಿ ಚಟ್ನಹಳ್ಳಿಯ ಶೋಭಾ (39) ಮೃತ ಮಹಿಳೆ. ಗೋಂದಿ ಚಟ್ನಹಳ್ಳಿಯಲ್ಲಿ ಶೋಭಾ, ರಂಗನಾಥ ದಂಪತಿ ಮನೆ ಕಟ್ಟಿದ್ದರು. ಬ್ಯಾಂಕ್‌ ಸಾಲ ಸಾಲದಾಗದೆ ಗ್ರಾಮದ ಆರು ಮಂದಿಯಿಂದ ಶೇ.3ರ ಬಡ್ಡಿಗೆ ಸಾಲ ಪಡೆದಿದ್ದರು. ಈಚೆಗೆ ರಂಗನಾಥ್‌ ನಡೆಸುತ್ತಿದ್ದ ಪಾನಿಪೂರಿ ವ್ಯಾಪಾರ ಕುಂಟಿತವಾಗಿತ್ತು. … Read more

ಶಿವಮೊಗ್ಗ ಸದ್ಯಕ್ಕೆ ಕೂಲ್‌ ಕೂಲ್‌, ಇವತ್ತು ಎಷ್ಟಿದೆ ತಾಪಮಾನ? ಯಾವಾಗ ಮಳೆಯಾಗಬಹುದು?

WEATHER-REPORT-GENERAL-IMAGE.webp

SHIVAMOGGA LIVE NEWS | 14 MAY 2024 WEATHER REPORT : ಶಿವಮೊಗ್ಗದಲ್ಲಿ ತಾಪಮಾನ ಸ್ವಲ್ಪ ತಗ್ಗಿದೆ. ಜಿಲ್ಲೆಯಲ್ಲಿ ಇವತ್ತು ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಇನ್ನು, ಜಿಲ್ಲೆಯಲ್ಲಿ ಇವತ್ತು ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಇನ್ನು, ಬೆಳಗ್ಗೆ 7 ಗಂಟೆಗೆ ಜಿಲ್ಲೆಯಲ್ಲಿ 24.3 ಡಿಗ್ರಿ ಸೆಲ್ಸಿಯಸ್‌, ಬೆಳಗ್ಗೆ 10ಕ್ಕೆ 30.7 ಡಿಗ್ರಿ, ಮಧ್ಯಾಹ್ನ 1 ಗಂಟೆಗೆ 35.6 ಡಿಗ್ರಿ, ಸಂಜೆ 5ಕ್ಕೆ … Read more