ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಖರೀದಿಸಿ ಮರಳಿದ ವ್ಯಕ್ತಿಗೆ ಕಾದಿತ್ತು ಆಘಾತ, ತಡವಾಗಿ ದಾಖಲಾಯ್ತು ಪ್ರಕರಣ

bike theft reference image

SHIVAMOGGA LIVE NEWS | 18 NOVEMBER 2023 SHIMOGA : ಫ್ರೀಡಂ ಪಾರ್ಕ್‌ನಲ್ಲಿ (freedom park) ಪಟಾಕಿ ಖರೀದಿಗೆ ತೆರಳಿದ್ದಾಗ ವ್ಯಕ್ತಿಯೊಬ್ಬರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳ್ಳತನ ಮಾಡಲಾಗಿದೆ. ನ.12ರಂದು ಘಟನೆ ಸಂಭವಿಸಿದೆ. ವಿನೋಬನಗರದ ಪ್ರಕಾಶ್‌ ಎಂಬುವವರು ದೀಪಾವಳಿ ಹಬ್ಬದಂದು ಪಟಾಕಿ ಖರೀದಿಗೆ ತೆರಳಿದ್ದರು. ಪಟಾಕಿ ಖರೀದಿಸಿ ಪಾರ್ಕಿಂಗ್‌ ಸ್ಥಳಕ್ಕೆ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಪ್ರಕಾಶ್‌ ಅವರು ನ.16ರಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ- ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, … Read more

ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ | ನಗರದಲ್ಲಿ ಭಾವನೋತ್ಸವ | ದೇಗುಲ ಸಮಿತಿ ಸದಸ್ಯರ ಸಭೆ ಮುಂದಕ್ಕೆ |

9-AM-FATAFAT-NEWS.webp

SHIVAMOGGA LIVE NEWS | 18 NOVEMBER 2023 ಸರ್ವ ಸದಸ್ಯರ ಸಭೆ ಮುಂದಕ್ಕೆ SAGARA : ನ.19ರಂದು ನಿಗದಿಯಾಗಿದ್ದ ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಮುಂದೂಡಲಾಗಿದೆ. ನ. 19ರಂದು ಬೆಳಿಗ್ಗೆ 10ಕ್ಕೆ ಶೃಂಗೇರಿ ಶಂಕರ ಮಠದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿನ ದಾವೆಯಲ್ಲಿನ ಆದೇಶದಂತೆ ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸರ್ವ ಸದಸ್ಯರ ಸಭೆಯ ಮುಂದಿನ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ … Read more

ಇಂಧನ ರಹಿತ ಅಡುಗೆ ಸ್ಪರ್ಧೆ, 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಬಗೆಬಗೆ ಖಾದ್ಯ ರೆಡಿ

181123-Cooking-Competitation-in-DVS-High-School-in-Shimoga.webp

SHIVAMOGGA LIVE NEWS | 18 NOVEMBER 2023 SHIMOGA : ದೇಶಿಯ ವಿದ್ಯಾಶಾಲೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಇಂಧನ ರಹಿತ ಅಡುಗೆ (Cooking) ಸ್ಪರ್ಧೆ ಆಯೋಜಿಸಲಾಗಿತ್ತು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಅಡುಗೆ ತಯಾರಿಸಿದರು. 8, 9 ಮತ್ತು 10ನೇ ತರಗತಿಯ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಡುಗೆ (Cooking) ತಯಾರಿಗೆ 30 ನಿಮಿಷ ಕಾಲವಕಾಶ ನೀಡಲಾಗಿತ್ತು. ತೀರ್ಪುಗಾರರು ಪ್ರತಿ ಅಡುಗೆಯ ರುಚಿ ನೋಡಿ ಬಹುಮಾನ ಘೋಷಿಸಿದರು. … Read more

ಕಾಂಪ್ಲೆಕ್ಸ್‌ನ ಮಹಡಿ ಮೇಲಿರುವ ಸೈಬರ್‌ ಸೆಂಟರ್‌ ಬಾಗಿಲು ತೆಗೆಯಲು ಬಂದ ಮಾಲೀಕನಿಗೆ ಕಾದಿತ್ತು ಶಾಕ್

House-Theft-in-Shimoga.

SHIVAMOGGA LIVE NEWS | 18 NOVEMBER 2023 SHIMOGA : ಅಂಗಡಿಯೊಂದರ ಶೆಟರ್‌ನ ಬೀಗ ಮುರಿದು ನಗದು ಮತ್ತು ರೆಡಿಮೇಡ್‌ ಬಟ್ಟೆಗಳನ್ನು ಕಳ್ಳತನ (Theft) ಮಾಡಲಾಗಿದೆ. ಮರುದಿನ ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಮಾಲೀಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಹರ್ಷ ಕಾಂಪ್ಲೆಕ್ಸ್‌ ಪಕ್ಕದ ಗುರುರಾಜ ಕಾಂಪ್ಲೆಕ್ಸ್‌ನ ಮಹಡಿಯಲ್ಲಿರುವ ಸೈಬರ್‌ ಮತ್ತು ಬಟ್ಟೆ ಮಳಿಗೆಯಲ್ಲಿ ಘಟನೆ ಸಂಭವಿಸಿದೆ. ಸೆಂಥಿಲ್‌ ಕುಮಾರ್‌ ಅವರು ನ.16ರಂದು ರಾತ್ರಿ ಸೈಬರ್‌ ಮತ್ತು ಬಟ್ಟೆ ಮಳಿಗೆಯ ಬಾಗಿಲಿಗೆ ಬೀಗ ಹಾಕಿ … Read more

ಹೊಸಮನೆ ಕೆಂಡಾರ್ಚನೆ ಜಾಗದಲ್ಲಿ ಸಮುದಾಯ ಭವನ, ನ್ಯಾಯಾಲಯದ ಮೊರೆ ಹೋಗುವ ಎಚ್ಚರ

181123-Hosamane-Samudaya-Bhavana-N-Manjunath-Krantideepa-press-meet.webp

SHIVAMOGGA LIVE NEWS | 18 NOVEMBER 2023 SHIMOGA : ದೇಗುಲ ಆಡಳಿತ ಮಂಡಳಿ, ಪಾಲಿಕೆ ಸದಸ್ಯೆ, ಸ್ಥಳೀಯರು ಮತ್ತು ಭಕ್ತರ ವಿರೋಧದ ನಡುವೆ ಹೊಸಮನೆಯ ಅಂತರಘಟ್ಟಮ್ಮ ದೇವಸ್ಥಾನಕ್ಕೆ ಸೇರಿದ ಕೆಂಡಾರ್ಚನೆ ಜಾಗದಲ್ಲಿ ಸಮುದಾಯ ಭವನ (Community hall) ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದಕ್ಕೆ ಪಾಲಿಕೆ ವತಿಯಿಂದ ಅವಕಾಶ ನೀಡಬಾರದು ಎಂದು ಹೊಸಮನೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.‌ಮಂಜುನಾಥ್‌ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ 32ನೇ ವಾರ್ಡ್ ಹೊಸಮನೆ ಬಡಾವಣೆ ಹಳೆಯ ನಗರವಾಗಿದ್ದು, … Read more

KSRTC ಬಸ್‌ ನಿಲ್ದಾಣ, KR ಪುರಂ ಬಳಿ ಯುವಕರು ವಶಕ್ಕೆ, ವೈದ್ಯಕೀಯ ಪರೀಕ್ಷೆಯಾಗ್ತಿದ್ದಂತೆ ಅರೆಸ್ಟ್‌, ಕಾರಣವೇನು?

crime name image

SHIVAMOGGA LIVE NEWS | 18 NOVEMBER 2023 SHIMOGA : ಪ್ರತ್ಯೇಕ ಪ್ರಕರಣದಲ್ಲಿ ನಗರದಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ 1 : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು (Youths) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನೆಲೆ ಮಹಾದೇವ್‌ (21) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪ್ರಕರಣ 2 : ಕೆ.ಆರ್‌.ಪುರಂ … Read more

ಮೆಗ್ಗಾನ್‌ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ, ಬಾಂಬೆ ಬ್ಲಡ್‌ಗಾಗಿ 6 ಗಂಟೆ ಪರಿಶ್ರಮ, ಏನಿದು ಆಪರೇಷನ್?

181123-Mc-Gann-Hospital-Bombay-Blood-case-operation.webp

SHIVAMOGGA LIVE NEWS | 18 NOVEMBER 2023 SHIMOGA : ಅತಿ ವಿರಳ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿದ್ದ ಹಾಗೂ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಶಸ್ತ್ರಚಿಕಿತ್ಸೆ (ರಪ್ಚರಡ್ ಎಕ್ಟೋಪಿಕ್) ಮಾಡಿ ಮೆಗ್ಗಾನ್ ಆಸ್ಪತ್ರೆ ವೈದ್ಯರು ಅವರ ಜೀವ ಉಳಿಸಿದ್ದಾರೆ. ಗರ್ಭನಾಳದಲ್ಲಿ ಗರ್ಭ ಧರಿಸಿದ್ದರು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೆ ಜೋಗದ ವೀರಭದ್ರಪ್ಪ ಅವರ ಪತ್ನಿ ಬೇಬಿ (31) ನವೆಂಬರ್‌ 12ರಂದು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ತುರ್ತು ಚಿಕಿತ್ಸೆ ವಿಭಾಗಕ್ಕೆ ದಾಖಲಾಗಿದ್ದರು. … Read more

ಕೆರೆಗೆ ನುಗ್ಗಿ ಅರ್ಧ ಮುಳುಗಿದ ಕಾರು, ಅದೃಷ್ಟವಶಾತ್‌ ದಂಪತಿ, ಮಗಳು ಪಾರು, ಹೇಗಾಯ್ತು ಘಟನೆ?

181123 Car rushes to lake near Ripponpete in Hosanagara

SHIVAMOGGA LIVE NEWS | 18 NOVEMBER 2023 RIPPONPETE : ಚಾಲಕನ ನಿಯಂತ್ರಣ ತಪ್ಪಿದ ಕಾರು (Car) ಕೆರೆಗೆ ನುಗ್ಗಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ತಾವರೆಕೆರೆಯಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಬೆಂಗಳೂರಿನಿಂದ ರಿಪ್ಪನ್‌ಪೇಟೆ ಮೂಲಕ ಸೊನಲೆ ಗ್ರಾಮಕ್ಕೆ ತೆರಳುತ್ತಿದ್ದರು. ರಿಪ್ಪನ್‌ಪೇಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೀದ ತಾವರೆಕೆರೆಗೆ ನುಗ್ಗಿದೆ. ಕಾರಿನಲ್ಲಿ ದಂಪತಿ ಮತ್ತು ಮಗಳು ಇದ್ದರು. ಅವಘಡ ಸಂಭವಿಸುತ್ತಿದ್ದಂತೆ ಮೂವರು ಕಾರಿನಿಂದ ಹೊರಗೆ ಬಂದಿದ್ದಾರೆ. … Read more

ಬಸವ ಕೇಂದ್ರದಲ್ಲಿ ಚಿಂತನ ಕಾರ್ತಿಕ | ಭದ್ರಾವತಿಗೆ ರಂಭಾಪುರಿ ಶ್ರೀ | ಆನಂದಪುರದಲ್ಲಿ ಶಿವಾನುಭವ ಗೋಷ್ಠಿ

FATAFAT-NEWS-GENERAL-IMAGE.jpg

SHIVAMOGGA LIVE NEWS | 18 NOVEMBER 2023 ಬಸವ ಕೇಂದ್ರದಿಂದ ಚಿಂತನ ಕಾರ್ತಿಕ ಶಿವಮೊಗ್ಗದ ಬಸವ ಕೇಂದ್ರದಿಂದ ನ.19ರಿಂದ ಡಿ.19ರವರೆಗೆ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನ.19 ರಂದು ಸಂಜೆ 6.30ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಯುಗದ ಸಿರಿ ಮತ್ತು ಯುಗದ ಬೆಳಕು ಪುಸ್ತಕಗಳು ಬಿಡುಗಡೆಯಾಗಲಿವೆ. ವಿಧಾನ ಪರಿಷತ್‌ ಸದಸ್ಯ ಎಸ್.ರುದ್ರೇಗೌಡರು ಪುಸ್ತಕ ಬಿಡುಗಡೆ ಮಾಡುವರು. ಕಾದಂಬರಿಕಾರ ಯ.ರು.ಪಾಟೀಲ (ಸವದತ್ತಿ) ಕಾರ್ಯಕ್ರಮ ಉದ್ಘಾಟಿಸುವರು. ಬಸವ ಕೇಂದ್ರದ ಅಧ್ಯಕ್ಷ ಬೆನಕಪ್ಪ … Read more

ತೀರ್ಥಹಳ್ಳಿಯ ನಂಟೂರಿನಲ್ಲಿ ಧಗಧಗ ಉರಿದ ಕೊಟ್ಟಿಗೆ

181123-Eclouser-at-Nanturu-in-Thirthahalli-taluk.webp

SHIVAMOGGA LIVE NEWS | 18 NOVEMBER 2023 THIRTHAHALLI : ಆಕಸ್ಮಿಕ ಬೆಂಕಿ ತಗುಲಿ ನಂಟೂರು ಗ್ರಾಮದಲ್ಲಿ ಜಾನುವಾರು ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನಿಲುವಾನಿ ಶ್ರೀನಿವಾಸ ಗೌಡ ಅವರಿಗೆ ಸೇರಿದ ಕೊಟ್ಟಿಗೆ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿದ್ದ ದನ, ಎಮ್ಮೆಗಳನ್ನು ಹಗ್ಗ ಬಿಚ್ಚಿ ಓಡಿಸಿದ್ದರಿಂದ ಜೀವ ಹಾನಿ ಸಂಭವಿಸಲಿಲ್ಲ. ಕೊಟ್ಟಿಗೆಯ ಚಾವಣಿಗೆಗೆ ಹಾಕಿದ್ದ ಪಕಾಸಿ ಸೇರಿದಂತೆ 300ಕ್ಕೂ ಹೆಚ್ಚು ಹುಲ್ಲಿನ ಪಿಂಡಿ ನಾಶವಾಗಿವೆ. ವಿಷಯ ತಿಳಿದ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯಕ್ಕೆ ನೆರವಾದರು. ಅಗ್ನಿಶಾಮಕ ದಳದ ಸಿಬ್ಬಂದಿ … Read more