ಆನಂದಪುರ, ಜನವರಿ 20ರಂದು ಮಹಾರಥೋತ್ಸವ, ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ
ಆನಂದಪುರ: ಇಲ್ಲಿನ ಬಸವನ ಬೀದಿಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವರ ಮಹಾರಥೋತ್ಸವ (Grand Rathotsava) ಜನವರಿ 20ರಂದು ನಡೆಯಲಿದೆ. ಈ ಹಿನ್ನೆಲೆ ದೇವಾಲಯದಲ್ಲಿ ಜ.19ರಿಂದ 21ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾವ್ಯಾವ ದಿನ ಏನೇನು ಕಾರ್ಯಕ್ರಮ? ಜನವರಿ 19ರ ಬೆಳಗ್ಗೆ10ಕ್ಕೆ ಗಣಪತಿ ಪೂಜೆ, ಪುಣ್ಯಾಹ, ಮಹಾಪೂಜೆ, ಸಂಜೆ ಯಾಗಶಾಲಾ ಪ್ರವೇಶ, ಪುಷೋತ್ಸವ ನಡೆಯಲಿದೆ. ಜನವರಿ 20ರಂದು ಬೆಳಗ್ಗೆ 9ಕ್ಕೆ ಗಣಪತಿ ಪೂಜೆ, ಕಲಾತತ್ವ ಹವನ, ಮಧ್ಯಾಹ್ನ 12ಕ್ಕೆ ಮಹಾರಥೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ, … Read more