ಜನರ ಸಮಸ್ಯೆ ನೋಡಲಾಗದೆ ರಸ್ತೆ ಗುಂಡಿಗಳನ್ನು ಮುಚ್ಚಿದ ಗ್ರಾಮ ಪಂಚಾಯಿತಿ ಸದಸ್ಯ

pot-holes-colsed-by-grama-panchayat-memeber-at-anaveri.

SHIVAMOGGA LIVE NEWS, 5 DECEMBER 2024 ಹೊಳೆಹೊನ್ನೂರು : ರಸ್ತೆಯಲ್ಲಿನ ಗುಂಡಿಗಳಿಂದ ಗ್ರಾಮಸ್ಥರು ಅನುಭವಿಸುತ್ತಿರುವ ತೊಂದರೆ ಮನಗಂಡ ಆನವೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಿಗೆಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್ ತಾವೇ ಸ್ವತಃ ಗುಂಡಿಗಳಿಗೆ (Pot Hole) ಮಣ್ಣು ಸುರಿದು ರಸ್ತೆ ದುರಸ್ತಿ ಮಾಡಿದ್ದಾರೆ. ಭದ್ರಾವತಿ ತಾಲೂಕು ಆವೇರಿಯಿಂದ ಇಟ್ಟಿಗೆಹಳ್ಳಿ ಸಂರ್ಪಕ ಕಲ್ಪಿಸುವ ಡಾಂಬ‌ರ್ ರಸ್ತೆ ಹಲವೆಡೆ ಕಿತ್ತುಹೋಗಿತ್ತು. ಮಳೆ ನೀರು ನಿಂತು ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದ್ದವು. ಇದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು … Read more

ಶೆಡ್‌ ನಿರ್ಮಾಣದ ವೇಳೆ ಕರೆಂಟ್‌ ಶಾಕ್‌, ಯುವಕ ಕೊನೆಯುಸಿರು

anaveri-youht-succumbed-due-to-shock.

HOLEHONNURU NEWS, 3 OCTOBER 2024 : ತಗಡಿನ ಶೆಡ್‌ (Shed) ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಆನವೇರಿಯ ಹನುಮಂತಾಪುರದ ಲಲಿತಾಬಾಯಿ ಕೃಷ್ಣೋಜಿ ರಾವ್‌ ಅವರ ಮಗ ರಕ್ಷಿತ್ (22) ಮೃತ. ಆನವೇರಿಯ ಕೆ.ಕೆ ರಸ್ತೆಯಲ್ಲಿ ರಕ್ಷಿತ್, ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟ್ರಿ ಹೋಟೆಲ್ ಶೆಡ್ ನಿರ್ಮಿಸಿದ್ದಾನೆ. ಬುಧವಾರ ಶೆಡ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ … Read more

ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್‌, ಸಂಪೂರ್ಣ ಜಖಂ, ಸ್ವಲ್ಪದರಲ್ಲಿ ತಪ್ಪಿತು ಪ್ರಾಣಹಾನಿ

Tipper-Lorry-mattihalla-near-anaveri.

SHIVAMOGGA LIVE NEWS | 5 FEBRUARY 2024 HOLEHONNURU : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆನವೇರಿ ಸಮೀಪದ ಮತ್ತಿಹಳ್ಳ ಸೇತುವೆ ಮೇಲಿಂದ ಲಾರಿ ಕೆಳಗೆ ಬಿದ್ದಿದೆ. ಎದುರಿನಿಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಚಕ್ರಗಳು ಕಳಚಿಕೊಂಡು, ಲಾರಿ ಜಖಂ ಆಗಿದೆ. ಎರಡು ಕ್ರೇನ್‌ಗಳನ್ನು ಬಳಸಿ ಭಾನುವಾರ … Read more

24 ವರ್ಷದ ಬಳಿಕ ಜಾತ್ರೆ, ಸಿಡಿ ಉತ್ಸವ ಕಣ್ತುಂಬಿಕೊಳ್ಳಲು ಸಾವಿರ ಸಾವಿರ ಭಕ್ತರು

Hirimavuradamma-Temple-Jathre-in-Anaveri

SHIVAMOGGA LIVE NEWS | HOLEHONNUR | 9 ಜೂನ್ 2022 ಆನವೇರಿ ಗ್ರಾಮದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರೆ ಅಂಗವಾಗಿ ಸಿಡಿ ಉತ್ಸವ ನಡೆಸಲಾಯಿತು. ದೊಡ್ಡ ಸಂಖ್ಯೆಯ ಭಕ್ತರು ಸಿಡಿ ಉತ್ಸವನ್ನು ಕಣ್ತುಂಬಿಕೊಂಡರು. 24 ವರ್ಷಗಳ ಬಳಿಕ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯುತ್ತಿದೆ. ಹಾಗಾಗಿ ವೈಭವದಿಂದ ಜಾತ್ರೆ ನೆರವೇರಿಸಲಾಗುತ್ತಿದೆ. ಸುತ್ತಮುತ್ತಲ ಗ್ರಾಮದ ಜನರು, ನೆರ ಜಿಲ್ಲೆಯ ಭಕ್ತರು ಕೂಡ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಕಟ್ಟುನಿಟ್ಟು ಮಡಿ, ಸಿಡಿ … Read more

ಆನವೇರಿಯಲ್ಲಿ ಜಾತ್ರೆ ಹಿನ್ನೆಲೆ, ಮೆಸ್ಕಾಂ ವತಿಯಿಂದ ಜನರಿಗೆ ಎಚ್ಚರಿಕೆ, ಕಾರಣವೇನು?

Bhadravathi News Graphics

SHIVAMOGGA LIVE NEWS | ELECTRICITY | 4 ಜೂನ್ 2022 ಆನವೇರಿ ಗ್ರಾಮದಲ್ಲಿ ಜೂನ್ 5 ರಿಂದ ಜೂನ್ 9ರವರೆಗೆ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ. ಮೆಸ್ಕಾಂ ಎಚ್ಚರಿಕೆ ಏನು? ಈ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ಔತಣ ಕೂಟ ಏರ್ಪಡಿಸುವವರು, ವಿದ್ಯುತ್ ಲೈನ್, ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವವರು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್, ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ … Read more

24 ವರ್ಷದ ಬಳಿಕ ಜಾತ್ರೆ, ಸಿದ್ಧತೆ ಕುರಿತು ಮಹತ್ವದ ಸಭೆ

Hiri-Mavuradamma-Temple-Jathre-Meeting-at-Anaveri

SHIVAMOGGA LIVE NEWS | TEMPLE | 27 ಮೇ 2022 24 ವರ್ಷದ ಬಳಿಕ ನಡೆಯುತ್ತಿರುವ ಹಿರಿ ಮಾವುರದಮ್ಮ ದೇವಿ ಸಿಡಿ ಉತ್ಸವ ಮತ್ತು ಜಾತ್ರೆ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಅವರು ನೇತೃತ್ವದಲ್ಲಿ ಸಭೆ ನಡೆಯಿತು. ಆನವೇರಿಯಲ್ಲಿ ಹಿರಿ ಮಾವುರದಮ್ಮ ದೇವಿ ಸಿಡಿ ಉತ್ಸವ ಮತ್ತು ಜಾತ್ರೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾತ್ರೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂಬ ಕುರಿತು ಸಭೆಯಲ್ಲಿ … Read more