ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಕೇಸ್ NIAಗೆ, ಏನಿದು NIA? ಇನ್ಮುಂದೆ ತನಿಖೆ ಹೇಗಾಗುತ್ತೆ?

Bajarangadal Worker Harsha Murdered

SHIVAMOGGA LIVE NEWS | 25 ಮಾರ್ಚ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ದೆಹಲಿ ವಿಭಾಗ ಈಗಾಗಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಕೊಲೆ ಹಿಂದ ಕಾಣದ ಕೈಗಳು ಹರ್ಷ ಹತ್ಯೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ಕೊಲೆಗೆ ಬರಿ ದ್ವೇಷ ಕಾರಣವಲ್ಲ. ಕಾಣದ ಕೈಗಳು ಇರುವ ಶಂಕೆ ವ್ಯಕ್ತವಾಗಿತ್ತು. ಇದೆ ಕಾರಣಕ್ಕೆ ಉನ್ನತ ತನಿಖೆ … Read more

ಬಜರಂಗದಳ ಕಾರ್ಯಕರ್ತ ಹರ್ಷ ಆತ್ಮಕ್ಕೆ ಶಾಂತಿ ಕೋರಿ ಹೋಮ

Harsha-Homa-in-Shimoga.

SHIVAMOGGA LIVE NEWS | 19 ಮಾರ್ಚ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇವತ್ತು ಹೋಮ ನಡೆಸಲಾಯಿತು. ಅರ್ಚಕ ವೃಂದದ ವತಿಯಿಂದ ತಿಲ ಪ್ರಾಯಶ್ಚಿತ ಹೋಮ ನಡೆಸಲಾಯಿತು. ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಇವತ್ತು ಅರ್ಚಕ ವೃಂದದ ವತಿಯಿಂದ ತಿಲ ಪ್ರಾಯಶ್ಚಿತ ಹೋಮ ಆಯೋಜಿಸಲಾಗಿತ್ತು. ಹರ್ಷ ಅವರ ಕುಟುಂಬದವರು ಹೋಮದಲ್ಲಿ ಪಾಲ್ಗೊಂಡಿದ್ದರು. ಧರ್ಮವನ್ನು ಬಿತ್ತಿ ಹೋದ ಹರ್ಷ ಇದೆ ಸಂದರ್ಭ ಮಾತನಾಡಿದ ಹಿರೆಹಡಗಲಿ ಹಾಲಸ್ವಾಮಿ ಮಾಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರು, … Read more

ಹರ್ಷ ಹತ್ಯೆ ಬಳಿಕ ಶಾಂತಿ ಭಂಗ, ವಿಚಾರಣೆಗೆ ಹಾಜರಾಗದವರಿಗೆ ನೊಟೀಸ್, ಎಷ್ಟು ಜನಕ್ಕೆ ನೊಟೀಸ್ ಕೊಡಲಾಗಿದೆ?

after procession stone pelting

SHIVAMOGGA LIVE NEWS | 11 ಮಾರ್ಚ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಸಾರ್ವಜನಿಕರ ಶಾಂತಿಭಂಗಕ್ಕೆ ಕುತ್ತು ತಂದ ಆರೋಪದ ಅಡಿ 379 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗದವರ ಮೇಲೆ ತಹಸೀಲ್ದಾರ್‌ ಕೋರ್ಟ್‌ನಿಂದ ವಾರಂಟ್‌ ಜಾರಿ ಮಾಡಲಾಗಿದೆ. ಮಂಗಳವಾರ ಮತ್ತು ಬುಧವಾರ 309 ಮಂದಿಗೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ತಹಸೀಲ್ದಾರ್‌ ಕೋರ್ಟ್ ನೋಟಿಸ್ ನೀಡಿತ್ತು. ಆದರೆ ಅದರಲ್ಲಿ ಬಹಳಷ್ಟು ಮಂದಿ ಗೈರು ಹಾಜರಾಗಿದ್ದಾರೆ. ಮಂಗಳವಾರ 209ರಲ್ಲಿ 150 ಮತ್ತು ಬುಧವಾರ 100ರಲ್ಲಿ … Read more

ಹರ್ಷ ಹತ್ಯೆ ವಿರುದ್ಧ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ

Shimoga-VHP-protest-against-Harsha-Murder.

SHIVAMOGGA LIVE NEWS | 7 ಮಾರ್ಚ್ 2022 ಹರ್ಷ ಹತ್ಯೆ ಖಂಡಿಸಿ ಶಿವಮೊಗ್ಗದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇವತ್ತು ಪ್ರತಿಭಟನೆ ನಡೆಸಿದರು. ಹತ್ಯೆ ಪ್ರಕರಣದಲ್ಲಿ ಭಾಗಿಯಾದವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧೆಡೆಯಿಂದ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದ್ದರು. 4 ಪ್ರಮುಖ ಡಿಮಾಂಡ್ ಬೇಡಿಕೆ 1 – ಹರ್ಷ ಹತ್ಯೆ ಪ್ರಕರಣ ಸಂಬಂಧ ಎಲ್ಲರನ್ನು ಕೂಡಲೆ ಬಂಧಿಸಬೇಕು. … Read more

ಹರ್ಷ ಮನೆಗೆ ಯಡಿಯೂರಪ್ಪ ಭೇಟಿ, ಚೆಕ್ ವಿತರಣೆ, ಅಲ್ಲಿ ಹೇಳಿದ 4 ಪ್ರಮುಖ ಸಂಗತಿಗಳೇನು?

Yedyurappa-Visit-Harsha-House-in-Shimoga

SHIVAMOGGA LIVE NEWS | 6 ಮಾರ್ಚ್ 2022 ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇವತ್ತು ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರ್ಕಾರದ ವತಿಯಿಂದ 25 ಲಕ್ಷ ರೂ. ಮೊತ್ತದ ಚೆಕ್ ವಿತರಣೆ ಮಾಡಿದರು. ಸೀಗೆಹಟ್ಟಿಯಲ್ಲಿ ಇರುವ ಹರ್ಷ ಮನೆಗೆ ಯಡಿಯೂರಪ್ಪ ಅವರು ಭೇಟಿ ನೀಡಿ, ಕುಟುಂಬದವರ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಯಡಿಯೂರಪ್ಪ ಹೇಳಿದ್ದೇನು? » ‘ಹರ್ಷ, ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಹಿಂದೂ ಯುವ ಮುಖಂಡನಾಗಿ ಬೆಳೆಯುತ್ತಿದ್ದ. … Read more

ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ., ಟಿಕೆಟ್ ವಿಚಾರದಲ್ಲಿ ಈಶ್ವರಪ್ಪ ಮಹತ್ವದ ಹೇಳಿಕೆ

BY-Raghavendra-and-Eshwarappa-in-BJP-Office

SHIVAMOGGA LIVE NEWS | 3 ಮಾರ್ಚ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಕಗ್ಗೊಲೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ಯಡಿಯೂರಪ್ಪ ಅವರು ಹರ್ಷ ನಿವಾಸಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ತಾವು ಮತ್ತು ಯಡಿಯೂರಪ್ಪ ಅವರು ಸರಕಾರದ ಪರವಾಗಿ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು. ವಿಶ್ವನಾಥ … Read more

‘ಸಚಿವ ಈಶ್ವರಪ್ಪ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಷ್ಟ ಭರಿಸಬೇಕು’

Eshwarappa-and-Congress-President-Sundaresh

SHIVAMOGGA LIVE NEWS | 28 ಫೆಬ್ರವರಿ 2022 ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೆರವಣಿಗೆಯ ನೇತೃತ್ವ ವಹಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಚನ್ನಬಸಪ್ಪ ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್  ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು, ಸಚಿವ ಈಶ್ವರಪ್ಪ ಅವರನ್ನು ಎ1 ಆರೋಪಿ ಮಾಡಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಗಲಭೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಬೇಕು. ಒಂದು ವೇಳೆ ಸಚಿವ ಈಶ್ವರಪ್ಪ … Read more

BREAKING NEWS | ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, ಮತ್ತಿಬ್ಬರು ಅರೆಸ್ಟ್

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈತನಕ ಎಂಟು ಆರೋಪಿಗಳನ್ನು ಬಂಧಿತರಾಗಿದ್ದಾರೆ. ಇವತ್ತು ಇಲಿಯಾಸ್ ನಗರದ ಫರಾಜ್ ಪಾಷಾ (24) ಮತ್ತು ವಾದಿ-ಎ-ಹುದಾ ಬಡಾವಣೆಯ ನಿವಾಸಿಗಳು ಅಬ್ದುಲ್ ಖಾದರ್ ಜಿಲಾನ್ (25) ಎಂಬುವವರನ್ನು ಬಂಧಿಸಲಾಗಿದೆ. ಕಳೆದ ಭಾನುವಾರ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾಗಿತ್ತು. ಇದನ್ನೂ ಓದಿ | ಹರ್ಷ ಹತ್ಯೆ ಕೇಸ್, ಬಂಧಿತರ … Read more

ಪೊಲೀಸರ ಎದುರಲ್ಲೇ ಮಾರಕಾಸ್ತ್ರ ಪ್ರದರ್ಶನ, ವಿಡಿಯೋಗಳು ವೈರಲ್

Lethal-Weapons-during-Clash-in-Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ, ನಂತರದ ಗಲಭೆ ಸಂದರ್ಭ ಕೆಲವು ಯುವಕರು ಪೊಲೀಸರ ಎದುರಲ್ಲೆ ಮಾರಕಾಸ್ತ್ರ ಪ್ರದರ್ಶಿಸಿದ್ದಾರೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಹರ್ಷ ಹತ್ಯೆ ಪ್ರಕರಣದ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸೋಮವಾರ ಬೆಳಗ್ಗೆ ಹರ್ಷ ಅಂತಿಮ ಯಾತ್ರೆ ನಡೆಯಿತು. ಈ ಸಂದರ್ಭ ಹಲವು ಕಡೆ ಕಲ್ಲು ತೂರಟವಾಗಿತ್ತು. ಇದೆ ವೇಳೆ ವಿವಿಧೆಡೆ ದುಷ್ಕರ್ಮಿಗಳು ಲಾಂಗು, ಮಚ್ಚು, ದೊಣ್ಣೆಗಳನ್ನು … Read more

ಶಿವಮೊಗ್ಗದ ಸೀಗೆಹಟ್ಟಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು

Media-in-Sigehatti-in-Shimoga.

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಶಿವಮೊಗ್ಗದ ಸೀಗೆಹಟ್ಟಿ ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳ ಕಾರ್ಯಕ್ಷೇತ್ರವಾಗಿ ಬದಲಾಗಿದೆ. ಹರ್ಷ ಹತ್ಯೆ ಪ್ರಕರಣ ಮತ್ತು ನಂತರ ನಡೆದ ಗಲಭೆ ಈಗ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಅವರ ಮನೆ ಶಿವಮೊಗ್ಗದ ಸೀಗೆಹಟ್ಟಿಯಲ್ಲಿದೆ. ಬಿಜೆಪಿ, ಸಂಘ ಪರಿವಾರದ ಪ್ರಮುಖರು ಹರ್ಷ ಮನೆಗೆ ಭೇಟಿ ನೀಡುತ್ತಿದ್ದಾರೆ. ಇದನ್ನು ಸೆರೆ ಹಿಡಿಯಲು ಮತ್ತು ವರದಿ ಮಾಡಲು ರಾಜ್ಯದ ವಾಹಿನಿಗಳು ಮಾತ್ರವಲ್ಲದೆ ರಾಷ್ಟ್ರೀಯ, … Read more