ಹೊಸನಗರದಲ್ಲಿ ಪಿಡಿಒಗೆ ಸಂಕಷ್ಟ ತಂದ ಮದುವೆ ಮನೆ ಬಾಡೂಟ
ಶಿವಮೊಗ್ಗ ಲೈವ್.ಕಾಂ | HOSANAGARA / RIPPONPETE NEWS | 22 MAY 2021 ಮದುವೆ ಬಳಿಕ ನಡೆದ ಬಾಡೂಟ ಕಾರ್ಯಕ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರ ಅಮಾನತಿಗೆ ಕಾರಣವಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆದರೂ ತಡೆಯುವಲ್ಲಿ ವಿಫಲವಾದ ಆರೋಪದ ಮೇಲೆ ಪಿಡಿಒ ಅವರನ್ನು ಅಮಾನತುಪಡಿಸಲಾಗಿದೆ. ರಿಪ್ಪನ್ ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಾಡೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ ಹಿನ್ನೆಲೆ ಪಿಡಿಒ ಹೆಚ್.ರಾಘವೇಂದ್ರ ಅವರು ಸಿಬ್ಬಂದಿಯೊಬ್ಬರನ್ನು ಕಳುಹಿಸಿ, ಪರಿಶೀಲನೆ ನಡೆಸಿದ್ದರು. … Read more