ಆನಂದಪುರ ಸಮೀಪ ಆಕಸ್ಮಿಕ ಬೆಂಕಿಗೆ ಮನೆ ಹಾನಿ, ವಸ್ತುಗಳು ಆಹುತಿ

MLA-Beluru-Gopalakrishna-visit-house-near-gouthamapura.

ಸಾಗರ : ಆಕಸ್ಮಿಕ ಬೆಂಕಿಗೆ ಮನೆಯೊಂದು (house) ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್‌ ಕುಟುಂಬದವರು ಪಾರಾಗಿದ್ದು, ಗೃಹೋಪಯೋಗಿ ವಸ್ತುಗಳು ಆಹುತಿಯಾಗಿವೆ. ವಿಷಯ ತಿಳಿದು ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಕುಟುಂಬಕ್ಕೆ ವೈಯಕ್ತಿಕವಾಗಿ ನೆರವಾದರು. ಸಾಗರ ತಾಲೂಕು ಆನಂದಪುರ ಸಮೀಪದ ಗೌತಮಪುರದ ಸರಸ್ವತಿ ಮಂಜಪ್ಪ ಎಂಬುವವರ ಮನೆಯಲ್ಲಿ ಸೋಮವಾರ ಬೆಳಗಿನ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ಕೂಡಲೆ ಹೊರ ಬಂದಿದ್ದು ಅದೃಷ್ಟವಶಾತ್‌ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು, ಜೀವನ ನಿರ್ವಹಣೆಗೆ ಇದ್ದ ಟೈಲರಿಂಗ್‌ ಮೆಷಿನ್‌ ಆಹುತಿಯಾಗಿವೆ. … Read more