ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ವರ್ಗಾವಣೆ, ಹೊಸ ಎಸ್‌ಪಿ ಯಾರು?
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ವರ್ಗಾವಣೆಯಾಗಿದೆ. ಜಿಲ್ಲೆಯ ನೂತನ ರಕ್ಷಣಾಧಿಕಾರಿಯಾಗಿ (NEW SP) ಬಿ.ನಿಖಿಲ್ ಅವರನ್ನು ನೇಮಕ ಮಾಡಿದ್ದಾರೆ. ಜಿ.ಕೆ.ಮಿಥುನ್ ಕುಮಾರ್ ಅವರು 2022ರ ಅಕ್ಟೋಬರ್ 5ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕೋಲಾರ ಜಿಲ್ಲೆಯ ರಕ್ಷಣಾಧಿಕಾರಿಯಾಗಿರುವ ಬಿ.ನಿಖಿಲ್ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ. ಇದನ್ನೂ ಓದಿ » ಭರ್ಜರಿ ಪಾರ್ಟಿಗೆ ರೆಡಿಯಾದ ಶಿವಮೊಗ್ಗ, ಹೊಸ ವರ್ಷಾಚರಣೆಗೆ ಎಲ್ಲೆಲ್ಲಿ ಹೇಗಿದೆ ಸಿದ್ಧತೆ?