ಭದ್ರಾ ಡ್ಯಾಮ್: ಜನವರಿ 31ರವರೆಗೆ ನದಿಗೆ ನೀರು, ಕಾರಣವೇನು? ಎಷ್ಟು ಹರಿಸಲಾಗುತ್ತದೆ?
ಶಿವಮೊಗ್ಗ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ನಡೆಯಲಿದೆ. ಈ ಹಿನ್ನೆಲೆ ಭದ್ರಾ ಜಲಾಶಯದಿಂದ (Bhadra Dam) ನೀರು ಹರಿಸಲಾಗುತ್ತಿದೆ. ಭದ್ರಾ ಜಲಾಶಯದಿಂದ ನದಿಗೆ ಜನವರಿ 20 ರಿಂದ ಜನವರಿ 30ರವರೆಗೆ ಪ್ರತಿ ದಿನ 500 ಕ್ಯೂಸೆಕ್ನಂತೆ ನೀರು ಹರಿಸಲಾಗುತ್ತದೆ. ಜನವರಿ 31 ರಂದು 300 ಕ್ಯೂಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ. ಒಟ್ಟು 0.50 ಟಿ.ಎಂ.ಸಿ ನೀರು ಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ, ಭದ್ರಾ ಯೋಜನಾ ವೃತ್ತದ … Read more