BREAKING NEWS – ಶಿವಮೊಗ್ಗದಲ್ಲಿ ಯುವಕನ ಕೊಲೆ, ಸ್ಥಳಕ್ಕೆ ಪೊಲೀಸರು ದೌಡು
ಶಿವಮೊಗ್ಗ: ರಾತ್ರಿ ಪಾರ್ಟಿ ವೇಳೆ ಗಲಾಟೆಯಾಗಿ ಸ್ನೇಹಿತನೆ (friends) ಯುವಕನ ಕೊಲೆ ಮಾಡಿದ್ದಾನೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಪವನ್, ಕಳೆದ ರಾತ್ರಿ ಸ್ನೇಹಿತ ಶಿವಕುಮಾರ್ ಮನೆಯಲ್ಲಿ ಪಾರ್ಟಿಗೆ ತೆರೆಳಿದ್ದ. ಮದ್ಯ ಸೇವಿಸಿದ ಬಳಿಕ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ. ಗಲಾಟೆಯಲ್ಲಿ ಪವನ್ ಹತ್ಯೆಯಾಗಿದೆ. ಘಟನೆ ಸಂಬಂಧ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more